ಕಾಬೂಲ್, ಸ. 14 (DaijiworldNews/HR): ಅಫ್ಗಾನಿಸ್ತಾನದ ಮಹಿಳೆಯರು ತಾಲಿಬಾನ್ ಆಡಳಿತದ ವಸ್ತ್ರಸಂಹಿತೆ ವಿರುದ್ಧ #DoNotTouchMyClothes ಮತ್ತು #AfghanistanCulture ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಆನ್ಲೈನ್ ಅಭಿಯಾನ ಪ್ರಾರಂಭಿಸಿದ್ದಾರೆ.
ಕಪ್ಪು ಬುರ್ಖಾ ಬದಲಿಗೆ ಅಫ್ಗಾನಿಸ್ತಾನದ ವಿವಿಧೆಡೆಯ ಸಾಂಪ್ರದಾಯಿಕ ಉಡುಗೆ ತೊಟ್ಟ ಫೊಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಫ್ಗಾನಿಸ್ತಾನದ ಇತಿಹಾಸ ತಜ್ಞೆ ಡಾ. ಬಹಾರ್ ಜಲಾಲಿ, "ಇದು ಅಫ್ಗಾನಿಸ್ತಾನದ ಸಂಸ್ಕೃತಿ. ನಾನು ಅಫ್ಗಾನಿಸ್ತಾನದ ಸಾಂಪ್ರದಾಯಿಕ ದಿರಿಸು ಧರಿಸಿದ್ದೇನೆ" ಎಂದು ಹೇಳಿದ್ದಾರೆ.