ಕಾಬೂಲ್, ಸೆ.19 (DaijiworldNews/PY): "ನಗರದ ಮಹಿಳಾ ಉದ್ಯೋಗಿಗಳು ಮನೆಯೊಳಗೆ ಇರಬೇಕು ಎಂದು ತಾಲಿಬಾನ್ ಆಡಳಿತ ಘೋಷಿಸಿದೆ" ಎಂದು ಹಂಗಾಮಿ ಮೇಯರ್ ಹಮ್ದುಲ್ಲಾ ನಮೋನಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿನ್ಯಾಸ ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿನ ಮಹಿಳಾ ಕುಶಲಕರ್ಮಗಳು ಹಾಗೂ ಮಹಿಳಾ ಶೌಚಾಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾತ್ರವೇ ಕೆಲಸಕ್ಕೆ ಅವಕಾಶವಿದೆ" ಎಂದಿದ್ದಾರೆ.
"ಕಾಬೂಲ್ ಮುನ್ಸಿಪಲ್ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಸದ್ಯಕ್ಕೆ ಅವರಿಗೆ ವೇತನ ದೊರಕಲಿದೆ" ಎಂದು ತಿಳಿಸಿದ್ದಾರೆ.
1990ರಲ್ಲಿ ತಾನಿಬಾನ್ ಸರ್ಕಾರದ ಇದ್ದ ವೇಳೆಯಲ್ಲೂ ಮಹಿಳೆಯರನ್ನು ಹಾಗೂ ಹೆಣ್ಣು ಮಕ್ಕಳನ್ನು ಶಾಲೆ ಹಾಗೂ ಉದ್ಯೋಗದಿಂದ ದೂರ ಇರಿಸಲಾಗಿತ್ತು.