ರಷ್ಯಾ, ಸೆ. 20 (DaijiworldNews/HR): ರಷ್ಯಾದ ಪರ್ಮ್ ವಿಶ್ವವಿದ್ಯಾಲಯದಲ್ಲಿ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದ್ದು, 8 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿ, ಅನೇಕ ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಸೋಮವಾರ ಬೆಳ್ಳಗ್ಗೆ ರಷ್ಯಾದ ಪರ್ಮ್ ವಿವಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಚೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ 8 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಒಬ್ಬ ಯುವಕ ವಿಶ್ವವಿದ್ಯಾಲಯದ ಕಟ್ಟಡಗಳಲ್ಲಿ ಒಂದನ್ನು ಪ್ರವೇಶಿಸಿ ಬಂದೂಕುಗಳೊಂದಿಗೆ ಗುಂಡು ಹಾರಿಸಲು ಪ್ರಾರಂಭಿಸಿದ್ದು, .ಇದರಿಂದ ಹೆದರಿದ ವಿದ್ಯಾರ್ಥಿಗಳು ಕಿಟಕಿಗಳ ಮೂಲಕ ಜಿಗಿದು ಓಡಿಹೋಗಿದ್ದಾರೆ ಎಂದು ವರದಿಯಾಗಿದೆ.