ನ್ಯೂಯಾರ್ಕ್, ಸೆ.22 (DaijiworldNews/PY): "ಭಾರತವು ಕೊರೊನಾ ಲಸಿಕೆಗಳನ್ನು ರಫ್ತು ಮಾಡಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್ ತಿಳಿಸಿದ್ದಾರೆ.
"ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ವರ್ಷಾಂತ್ಯದೊಳಗೆ ಜನಸಂಖ್ಯೆಯ ಶೇ.40ರಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಬೇಕು ಎನ್ನುವ ಗುರಿ ಸಾಧನೆಯನ್ನು ಇಟ್ಟುಕೊಂಡ ಭಾರತಕ್ಕೆ ಈ ತೀರ್ಮಾನ ಸಹಾಯವಾಗಲಿದೆ" ಎಂದಿದ್ದಾರೆ.
"ಕೊರೊನಾ ಲಸಿಕೆಯ ರಫ್ತಿಗಾಗಿ ಅಕ್ಟೋಬರ್ನಲ್ಲಿ ಚಾಲನೆ ನೀಡುವುದಾಗಿ ಘೋಷಣೆ ಮಾಡಿರುವುದಕ್ಕೆ ಆರೋಗ್ಯ ಸಚಿವರಿಗೆ ಧನ್ಯವಾದಗಳು" ಎಂದು ಗೆಬ್ರೇಯೇಸಸ್ ಟ್ವೀಟ್ ಮಾಡಿದ್ದಾರೆ.
ಲಸಿಕೆ ಮೈತ್ರಿ ಕಾರ್ಯಕ್ರಮದಡಿ ಅಕ್ಟೋಬರ್ ವೇಳೆಗೆ ಕೊರೊನಾ ಲಸಿಕೆಗಳ ರಫ್ತಿಗೆ ಚಾಲನೆ ನೀಡುವುದಾಗಿ ಭಾರತ ಸೋಮವಾರ ಘೋಷಣೆ ಮಾಡಿತ್ತು.
ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ಸಂದರ್ಭ ಕೊರೊನಾ ಲಸಿಕೆಗಳ ರಫ್ತನ್ನು ಭಾರತ ನಿಲ್ಲಿಸಿತ್ತು.