ಒಟ್ಟಾವ, ಸೆ.26 (DaijiworldNews/HR): ಕೊರೊನಾದಿಂದಾಗಿ ಭಾರತದಿಂದ ಬರುವ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಕೆನಡಾ ತೆರವುಗೊಳಿಸಿದ್ದು, ಬೇರೆ ದೇಶದ ಮೂಲಕ ಕೆನಡಾ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಭಾರತದಿಂದ ನೇರ ಕೆನಡಾಗೆ ವಿಮಾನಯಾನ ಕೈಗೊಳ್ಳುವವರು ಪ್ರಯಾಣದ 18 ಗಂಟೆ ಒಳಗಾಗಿ ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.
ಇನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೊ ನಿಲ್ದಾಣದ ಬಳಿ ಇರುವ ಜೆನೆಸ್ಟ್ರಿಂಗ್ಸ್ ಪ್ರಯೋಗಾಲಯದಲ್ಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೆನಡಾ ಸರ್ಕಾರ ತಿಳಿಸಿದೆ.
ಬೇರೊಂದು ದೇಶದ ಮೂಲಕ ಕೆನಡಾಗೆ ತೆರಳುವವರಾಗಿದ್ದರೆ, ಆ ದೇಶದಿಂದ ನೆಗೆಟಿವ್ ಪ್ರಮಾಣಪತ್ರ ತರಬೇಕು ಎಂದು ಹೇಳಿದೆ.