ಬರ್ಲಿನ್, ಸೆ.27 (DaijiworldNews/HR): ಜರ್ಮನಿಯಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಳೆದ 16 ವರ್ಷಗಳಿಂದ ಅಧಿಕಾರದಲ್ಲಿದ್ದ ಆಯಂಜೆಲಾ ಮರ್ಕೆಲ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿಯನ್ನು ಸೋಶಿಯಲ್ ಡೆಮಾಕ್ರೆಟ್ಸ್ ಪಕ್ಷವು ಕಡಿಮೆ ಅಂತರದಿಂದ ಜಯಗಳಿಸಿದೆ.
ಆಯಂಜೆಲಾ ಮರ್ಕೆಲ್
ಸೋಶಿಯಲ್ ಡೆಮಾಕ್ರೆಟ್ಗಳಿಗೆ ಶೇ 26ರಷ್ಟು ಮತಗಳು ದೊರಕಿದ್ದು, ಕನ್ಸರ್ವೇಟಿವ್ ಪಕ್ಷಕ್ಕೆ ಶೇ 24.5 ಮತಗಳು ದೊರಕಿವೆ.
ಜರ್ಮನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇದ್ದ ಮರ್ಕೆಲ್ ಅವರ ಕನ್ಸರ್ವೇಟಿವ್ ಪಕ್ಷ ಹಾಗೂ ಸಿಎಸ್ಯು ಮೈತ್ರಿ ಮತ್ತೆ ಮುಂದುವರಿಯುವ ಲಕ್ಷಣಗಳಿಲ್ಲ. ಸದ್ಯದ ಮಟ್ಟಿಗೆ ಸೋಶಿಯಲ್ ಡೆಮಾಕ್ರೆಟ್ಸ್ ಅಥವಾ ಕನ್ಸರ್ವೇಟಿವ್ ಪಕ್ಷ ನೇತೃತ್ವದ ತ್ರಿಪಕ್ಷೀಯ ಮೈತ್ರಿ ರಚನೆ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇನ್ನು ಸಾಮಾಜಿಕ ಪ್ರಜಾಪ್ರಭುತ್ವವಾದಿಗಳ ಪೈಕಿ ವಿಲ್ಲಿ ಬ್ರಾಂಡ್, ಹೆಲ್ಮಟ್ ಸ್ಮಿತ್ ಮತ್ತು ಗೆರ್ಹಾರ್ಡ್ ಶ್ರೋಡರ್ ನಂತರ 63 ವರ್ಷದ ಸ್ಕೋಲ್ಜ್ ನಾಲ್ಕನೇ ಚಾನ್ಸಲರ್ ಆಗಿದ್ದಾರೆ.