ಕ್ವಿಟೊ, ಸೆ.29 (DaijiworldNews/PY): "ಈಕ್ವೆಡಾರ್ನ ಗಯಾಕ್ವಿನ್ನ ಜೈಲಿನಲ್ಲಿ ಗ್ರೆನೇಡ್ ಸ್ಪೋಟಗೊಂಡ ಪರಿಣಾಮ 24 ಕೈದಿಗಳು ಸಾವನ್ನಪ್ಪಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಘಟನೆಯಲ್ಲಿ 48 ಮಂದಿ ಕೈದಿಗಳು ಗಾಯಗೊಂಡಿದ್ದಾರೆ" ಎಂದು ರಾಷ್ಟ್ರೀಯ ಕಾರಾಗೃಹಗಳ ಬ್ಯುರೊ ಪ್ರಕಟಣೆಯಲ್ಲಿ ತಿಳಿಸಿದೆ.
"ಗ್ರೆನೇಡ್ ಸ್ಪೋಟದಿಂದಲೇ ಕೈದಿಗಳು ಮೃತಪಟ್ಟಿರುವುದು ದೃಢಪಟ್ಟಿದೆ" ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಜನರಲ್ ಫೌಸ್ಟೊ ಬ್ಯೂನಾನೊ ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಕಾರಾಗೃಹಗಳ ಬ್ಯುರೊ ಪ್ರಕಟಣೆಯನ್ನು ಟ್ವೀಟ್ ಮಾಡಿರುವ ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ವೊ ಲಾಸೋ, "ತನಿಖೆಗೆ ಆದೇಶಿಸಲಾಗಿದೆ" ಎಂದಿದ್ದಾರೆ.
"ಘಟನೆಯಲ್ಲಿ ಸಾವನ್ನಪ್ಪಿದರವರು ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ಆರೋಪಿಗಳಾಗಿದ್ದರು"ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಕೈದಿಗಳು ಜೈಲಿನಿಂದ ಪರಾರಿಯಾಗಲು ಸ್ಪೋಟ ನಡೆಸಿದ್ದಾರೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ" ಎಂದಿದ್ಧಾರೆ.