ಷೆನ್ ಯಾಂಗ್, ಸೆ 30 (DaijiworldNews/MS): ತಂತ್ರಜ್ಞಾನ್ದಲ್ಲಿ ಮುಂಚೂಣಿಯಲ್ಲಿರುವ ಚೀನಾದಲ್ಲಿ ತೀವ್ರ ವಿದ್ಯುತ್ ಅಭಾವ ಎದುರಾಗಿದೆ, ಪರಿಣಾಮ ಜನರು ಜನರೇಟ್ , ಮೊಂಬತ್ತಿ, ಸ್ಮಾರ್ಟ್ ಫೋನ್ಗಳನ್ನು ಬಳಸಿ ಆಹಾರ ಸೇವಿಸಿವುದು ಹಾಗೂ ದಿನನಿತ್ಯದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಕಾರ್ಖಾನೆಗಳಲ್ಲಿ ಉತ್ಪಾದನೆ ಪಾತಾಳಕ್ಕೆ ಕುಸಿದಿದ್ದು, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.ಹೆಚ್ಚಿನ ನಗರಗಳಲ್ಲಿ ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ. ಇಂಧನ ಬಳಕೆಯನ್ನು ತಗ್ಗಿಸುವ ಗುರಿ ಸಾಧಿಸಲು ವಿದ್ಯುತ್ ಕಡಿತವನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ.
ವಿದ್ಯುತ್ ವ್ಯತ್ಯದಿಂದ ಮನೆಗಳು ಸ್ಥಬ್ದವಾಗಿದೆ. ಬಟ್ಟೆ ತೊಳೆಯುವುದು , ಪಾತ್ರೆ ತೊಳೆಯುವ ಸೌಲಭ್ಯ ಇಲ್ಲದೆ ಕೆಲಸಗಳು ನೆನೆಗುದಿಗೆ ಬಿದ್ದು ಹಲವಾರು ಜನ ರೆಸ್ಟೋರೆಂತ್ ಗೆ ಮುಗಿಬಿದ್ದಿದ್ದಾರೆ. ಜನರೇಟ್ ಆಧಾರಿತ ವಿದ್ಯುತ್ ಸೌಕರ್ಯ ಉಳ್ಳ ರೆಸ್ಟೋರೆಂಟ್ ಮಾತ್ರ ಉಪಹಾರ ಸೇವೆ ನೀಡುತ್ತಿದ್ದು ಉಳಿದವುಗಳು ಬಾಗಿಲು ಹಾಗಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಲ್ಲಿದ್ದಲು ಬೆಲೆಗಳು ಗಗನಕ್ಕೇರಿರುವುದರಿಂದ ಬೇಡಿಕೆಯಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯುತ್ ಕಂಪನಿಗಳು ಹೇಳಿವೆ ಚೀನಾದ ಕೆಲವು ಕಾರ್ಖಾನೆಗಳಲ್ಲಿ ಉತ್ಪಾದನೆ ನಿಲ್ಲಿಸಲು ಆದೇಶ ನೀಡಲಾಗಿದೆ. ಇದರ ಪರಿಣಾಮ ಸ್ಮಾರ್ಟ್ ಫೋನ್, ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.
ಇತ್ತೀಚಿಗೆ ಚೀನಾದ ವಿದ್ಯುತ್ ಬಳಕೆ ದ್ವಿಗುಣಗೊಂಡಿದೆ. ಇದರಿಂದ ಹೆಚ್ಚಿನ ಇಂಗಾಲದ ಹೊರಸೂಸುವಿಕೆಯಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ಅಕ್ಟೋಬರ್ 12- 13ರಂದು ಚೈನಾದ ಕುನ್ಮಿಂಗ್ನಲ್ಲಿ ನಡೆಯಲಿದೆ. ಆತಿಥೇಯ ರಾಷ್ಟ್ರವಾಗಿ ಈ ಮಟ್ಟದಲ್ಲಿ ಇಂಧನ ಬಳಸುವುದು ಅಂತಾರಾಷ್ಟ್ರೀಯ ಟೀಕೆ ವ್ಯಕ್ತವಾಗುತ್ತಿವೆ.ಹೀಗಾಗಿ ನಿಗದಿತ ಮಟ್ಟದಲ್ಲಿ ವಿದ್ಯುತ್ ಉಳಿಸಬೇಕು ಎಂಬ ಸರ್ಕಾರದ ಹುಚ್ಚು ನಿರ್ಧಾರದಿಂದ ಈ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ.
ಚೀನಾದ ಮನೆಗಳಲ್ಲಿ ಸೆಲ್ ಫೋನ್ ಗಳ ಬೆಳಕಿನಲ್ಲಿ ಕುಟುಂಬ ಸದಸ್ಯರು ಆಹಾರ ಸೇವಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.