ಟೊಕಿಯೊ, ಅ.01 (DaijiworldNews/PY): ಕೊರೊನಾ ನಿಯಂತ್ರಣಕ್ಕಾಗಿ ಆರು ತಿಂಗಳಿನಿಂದ ಜಪಾನ್ ದೇಶದಾದ್ಯಂತ ವಿಧಿಸಿದ್ದ ಲಾಕ್ಡೌನ್ ತೆರವುಗೊಳಿಸಿದ್ದು, ಸಾವಿರಾರು ನೌಕರರು ಉದ್ಯೋಗಕ್ಕಾಗಿ ತೆರಳಲು ತಮ್ಮ ಕಚೇರಿಗಳತ್ತ ತೆರಳಲು ಇಲ್ಲಿನ ರೈಲು ನಿಲ್ದಾಣಗಳಲ್ಲಿ ಜಮಾಯಿಸಿದ್ದರು.
ಲಾಕ್ಡೌನ್ ಅಂತ್ಯವಾಗುತ್ತಿದ್ದಂತೆ ಆರು ತಿಂಗಳುಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದ ನೌಕರರು ತಮ್ಮ ತಮ್ಮ ಕಚೇರಿಗಳಿಗೆ ತೆರಳಲು ಶಿವಗನಾ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದು, ರೈಲುಗಳು ಪ್ರಯಾಣಿಕರಿಂದ ತುಂಬಿ ಹೋಗಿತ್ತು.
"ಲಾಕ್ಡೌನ್ ತೆರವುಗೊಳಿಸಿರುವ ಕಾರಣ ಆರ್ಥಿಕ ಚಟುವಟಿಕೆಗಳ ಪುನಶ್ಚೇತನದೊಂದಿಗೆ ಜಪಾನಿನ ಆರೋಗ್ಯ ರಕ್ಷಣ ವ್ಯವಸ್ಥೆಗಳ ಮೇಲಿನ ಒತ್ತಡ ಕೂಡಾ ಕುಗ್ಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣದ ಸಲುವಾಗಿ ದೇಶದಾದ್ಯಂತ ವಿಧಿಸಿದ್ದ ತುರ್ತುಪರಿಸ್ಥಿತಿ ಹಾಗೂ ನಿರ್ಬಂಧವನ್ನು ತೆರವುಗೊಳಿಸುತ್ತಿರುವುದಾಗಿ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಪ್ರಕಟಿಸಿದ್ದರು.