ಅಮೇರಿಕಾ, ಅ.02 (DaijiworldNews/PY): "ಗರ್ಭಪಾತ ಹಕ್ಕನ್ನು ನಿಷೇಧಿಸುವ ಟೆಕ್ಸಾಸ್ನ ಕಠಿಣ ಕಾನೂನಿಗೆ ತಡೆ ನೀಡಬೇಕು" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ನೇತೃತ್ವದ ಸರ್ಕಾರ ಫೆಡರಲ್ ಕೋರ್ಟ್ನ ನ್ಯಾಯಾಧೀಶರನ್ನು ಒತ್ತಾಯಿಸಿದ್ದಾರೆ.
"ಟೆಕ್ಸಾಸ್, ಗರ್ಭಪಾತದ ಬಗ್ಗೆ ಮಹಿಳೆಯರ ಸಾಂವಿಧಾನಿಕ ಹಕ್ಕಿನ ಮೇಲೆ ಈ ಕಾಯ್ದೆಯ ಮೂಲಕ ದಾಳಿ ನಡೆಸಿದೆ" ಎಂದು ಜೋ ಬಿಡೆನ್ ಸರ್ಕಾರ ತಿಳಿಸಿದೆ.
ನ್ಯಾಯಾಂಗ ಇಲಾಖೆಯ ವಕೀಲ ಅಟಾರ್ನಿ ಬ್ರಿಯಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರು ವಾರಗಳವೆರೆಗೆ ಒಂದು ರಾಜ್ಯ ಗರ್ಭಪಾತದ ಹಕ್ಕನ್ನು ನಿರ್ಬಂಧಿಸಬಾರದು. ಈ ಬಗ್ಗೆ ಗೊತ್ತಿದ್ದರೂ ಟೆಕ್ಸಾಸ್ ಕಾನೂನು ರೂಪಿಸಿದೆ ಎಂದಿದ್ದಾರೆ.
ಈ ಕಾಯ್ದೆಯು ಸೆಪ್ಟೆಂಬರ್ ಪ್ರಾರಂಭದಲ್ಲಿ ಜಾರಿಯಾಗಿದ್ದು, ಗರ್ಭಪಾತವನ್ನು ನಿಷೇಧಿಸಲಾಗಿದೆ. ಗರ್ಭಪಾತ ಕಾನೂನನ್ನು ತಡೆಹಿಡಿದರೂ ಕೂಡಾ ಟೆಕ್ಸಾಸ್ನಲ್ಲಿ ಗರ್ಭಪಾತಕ್ಕೆ ನೆರವಾಗುವ ಸೇವೆಗಳು ಶೀಘ್ರವೇ ಆರಂಭವಾಗುವುದಿಲ್ಲ ಎನ್ನಲಾಗಿದೆ.