ಇಟಲಿ, ಅ 04 (DaijiworldNews/MS): ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಖಾಲಿ ಕಚೇರಿ ಕಟ್ಟಡವೊಂದಕ್ಕೆ ಖಾಸಗಿ ವಿಮಾನ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ.
ಮಿಲನ್ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಈ ವಿಮಾನವು ಸಾರ್ಡಿನಾದತ್ತ ಸಾಗುತ್ತಿತ್ತು. ಉಪನಗರ ಮೆಟ್ರೋ ನಿಲ್ದಾಣದ ಹೊರಗೆ ಈ ಅಪಘಾತ ಸಂಭವಿಸಿದೆ.
ಈ ವಿಮಾನದಲ್ಲಿದ್ದ ಪೈಲಟ್ ಡಾನ್ ಪೆಟ್ರೆಸ್ಕು, ಅವರ ಪತ್ನಿ ಮತ್ತು ಮಕ್ಕಳು, ಮೂರು ರೊಮೇನಿಯನ್, ಇಬ್ಬರು ಫ್ರೆಂಚ್, ಒಬ್ಬ ಇಟಾಲಿಯನ್ ಮತ್ತು ಒಬ್ಬ ಕೆನಡಿಯನ್ ಪ್ರಜೆ ಪ್ರಯಾಣಿಸುತ್ತಿದ್ದರು.
ರಿಪೇರಿ ಕೆಲಸ ನಡೆಯುತ್ತಿದ್ದ ಕಾರಣ ವಿಮಾನ ಡಿಕ್ಕಿ ಹೊಡೆದ ಕಟ್ಟಡವು ಖಾಲಿ ಇದ್ದದ್ದರಿಂದ ಇನ್ನಷ್ಟು ಅನಾಹುತ ತಪ್ಪಿದೆ. ಅಪಘಾತದ ತೀವ್ರತೆಯ ಪರಿಣಾಮ ವಿಮಾನದ ಡಿಕ್ಕಿಯ ಸದ್ದು ಅಕ್ಕಪಕ್ಕದ ಪ್ರದೇಶಗಳಿಗೆಲ್ಲಾ ಕೇಳಿಸಿದೆ. ಸಾರ್ಡಿನಿಯಾಕ್ಕೆ ಹೊರಟಿದ್ದ ವಿಮಾನ ರೊಮೇನಿಯನ್ ಸರ್ಕಾರದಲ್ಲಿ ನೋಂದಾಯಿಸಲ್ಪಟ್ಟದಾಗಿದೆ.