ವಾಷಿಂಗ್ಟನ್, ಅ 05 (DaijiworldNews/MS): ಜಗತ್ತಿನಾದ್ಯಂತ ವಾಟ್ಸ್ ಆಯಪ್ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸ್ಥಗಿತಗೊಂಡು ಬಳಕೆದಾರರು ತೊಂದರೆ ಅನುಭವಿಸಿದ್ದು, ಇದಕ್ಕೆ ಬೇಸರ ವ್ಯಕ್ತಪಡಿಸಿ ಫೇಸ್ಬುಕ್ ಸಿಇಓ ಮಾರ್ಕ್ ಜುಕರಬರ್ಗ್ ಬಳಕೆದಾರರಲ್ಲಿ ವೈಯಕ್ತಿಕವಾಗಿ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಫೇಸ್ಬುಕ್ ಪೋಸ್ಟ್ ಹಾಕಿರುವ ಅವರು, '"ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಮೆಸೆಂಜರ್ ಈಗ ಮತ್ತೆ ಸಹಜ ಬರುತ್ತಿವೆ ಅಡಚಣೆಗಾಗಿ ಕ್ಷಮಿಸಿ - ನೀವು ಕಾಳಜಿವಹಿಸುವ ಜನರೊಂದಿಗೆ ಸಂಪರ್ಕದಲ್ಲಿರಲು ನೀವು ನಮ್ಮ ಸೇವೆಗಳನ್ನು ಎಷ್ಟು ಸಂಬಂಧ ಹೊಂದಿದ್ದೀರಿ ಎಂದು ನನಗೆ ತಿಳಿದಿದೆ" ಎಂದು ಜುಕರ್ಬರ್ಗ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
2019 ರಿಂದ ಫೇಸ್ಬುಕ್ ಸರ್ವರ್ನಲ್ಲಿ ಅತಿ ಹೆಚ್ಚು ಸಮಯ ವ್ಯತ್ಯಯ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಗೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಜಾಗತಿಕವಾಗಿ ಫೇಸ್ಬುಕ್ನ ಸಾಮಾಜಿಕ ಮಾಧ್ಯಮ ಆಯಪ್ಗಳಲ್ಲಿ ವ್ಯತ್ಯಯ ಎದುರಾಗುತ್ತಿದ್ದಂತೆ ಅಮೆರಿಕ ಷೇರುಪೇಟೆಯಲ್ಲಿ ಫೇಸ್ಬುಕ್ ಷೇರು ಬೆಲೆ ಶೇ 5ರಷ್ಟು ಕುಸಿತ ಕಂಡಿತು. ಆಯಪ್ಗಳ ಸೇವೆ ಪುನರಾರಂಭವಾಗುತ್ತಿದ್ದಂತೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ.
ಫೇಸ್ಬುಕ್ನ ಸ್ಥಾಪಕ ಮಾರ್ಕ್ ಝುಕರ್ಬರ್ಗ್ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 44,713 ಕೋಟಿ ಖಲ್ಲಾಸ್. ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್ಬುಕ್ನ ಸಿಇಒ ಆದ ಝಕರ್ಬರ್ಗ್ ಆಸ್ತಿಯು 122 ಬಿಲಿಯನ್ ಅಮೆರಿಕನ್ ಡಾಲರ್ಗೆ ಕುಸಿದಿದೆ. ಒಂದು ದಿನ- ಕೆಲವು ಗಂಟೆಗಳ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಝುಕರ್ಬರ್ಗ್ರನ್ನು ಬಿಲ್ಗೇಟ್ಸ್ಗೂ ಕೆಳಗೆ ಐದನೇ ಸ್ಥಾನಕ್ಕೆ ತಳ್ಳಿದೆ.