ಇಸ್ಲಾಮಾಬಾದ್, ಅ.10 (DaijiworlNews/HR): ಪಾಕಿಸ್ತಾನದ ಅಣ್ವಸ್ತ್ರ ಪಿತಾಮಹ, ಪರಮಾಣು ವಿಜ್ಞಾನಿ ಡಾ. ಅಬ್ದುಲ್ ಖದೀರ್ ಖಾನ್ (85) ಭಾನುವಾರದಂದು ಇಸ್ಲಾಮಾಬಾದಿನಲ್ಲಿ ನಿಧನರಾಗಿದ್ದಾರೆ.
ಅಬ್ದುಲ್ ಖದೀರ್ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಇಸ್ಲಾಮಾಬಾದಿನ ಕೆಆರ್ ಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಿಧನರಾದರು ಎಂದು ವರದಿಯಾಗಿದೆ.
ಇನ್ನು ವಿಜ್ಞಾನಿ ಡಾ. ಅಬ್ದುಲ್ ಖದೀರ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್,ಡಾ. ಅಬ್ದುಲ್ ಖದೀರ್ ಖಾನ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ನಮ್ಮನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿ ಮಾಡುವಲ್ಲಿ ಅವರ ನಿರ್ಣಾಯಕ ಕೊಡುಗೆಯ ಬಗ್ಗೆ ನಮ್ಮ ರಾಷ್ಟ್ರವು ಅವರನ್ನು ಪ್ರೀತಿಸುತ್ತಿತ್ತು ಪಾಕಿಸ್ತಾನದ ಜನರಿಗೆ ಅವರು ರಾಷ್ಟ್ರೀಯ ಐಕಾನ್ ಆಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.