ಕಾಬೂಲ್, ಅ.11 (DaijiworldNews/PY): ಅಮೇರಿಕಾ ಹಾಗೂ ಬ್ರಿಟನ್ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದು, ಕಾಬೂಲ್ನ ಜನಪ್ರಿಯ ಹೋಟೆಲ್ ಸೆರೆನಾ ಸೇರಿದಂತೆ ಅದರ ಸುತ್ತಮುತ್ತಲಿನ ಯಾವುದೇ ಐಷಾರಾಮಿ ಹೋಟೆಲ್ಗಳಲ್ಲಿ ನಿಲ್ಲದಂತೆ ತಿಳಿಸಿದೆ.
ಭದ್ರತಾ ಬೆದರಿಕೆಗಳಿರುವ ಕಾರಣದಿಂದ ಸೆರೆನಾ ಸೇರಿದಂತೆ ಅದರ ಸುತ್ತಮುತ್ತಲಿನ ಹೋಟೆಲ್ಗಳಲ್ಲಿ ವಾಸ್ತವ್ಯವಿರುವ ಅಮೇರಿಕಾ ಪ್ರಜೆಗಳು ಅಲ್ಲಿಂದ ತೆರಳುವಂತೆ ಅಮೇರಿಕಾ ಸರ್ಕಾರ ಹೇಳಿದೆ.
ಬ್ರಿಟನ್ ಕೂಡಾ ತನ್ನ ಪ್ರಜೆಗಳಿಗೆ ಸಲಹೆ ನೀಡಿದ್ದು, ಅಫ್ಗಾನಿಸ್ತಾನಕ್ಕೆ ತೆರಳದಂತೆ ತಿಳಿಸಿದ್ದು, ಕಾಬೂಲ್ನಲ್ಲಿರುವ ಹೋಟೆಲ್ಗಲ್ಲಿ ಉಳಿಯದಂತೆ ಸಲಹೆ ನೀಡಿದೆ.
ಕಾಬೂಲ್ ಹಾಗೂ ಸೆರೆನಾದಲ್ಲಿರುವ ಐಷಾರಾಮಿ ಹೋಟೆಲ್ಗಳು ತಾಲಿಬಾನ್ಗಳ ಕೈವಶವಾಗುವ ಮೊದಲು ವಿದೇಶಿಯರು ಈ ಹೋಟೆಲ್ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಈ ಹೋಟೆಲ್ ಇತ್ತೀಚೆಗೆ ಎರಡು ಬಾರಿ ಉಗ್ರ ದಾಳಿಗೆ ಗುರಿಯಾಗಿತ್ತು.