ನಾರ್ವೆ, ಅ 14 (DaijiworldNews/MS):ನಾರ್ವೇಜಿಯನ್ ಪಟ್ಟಣವಾದ ಕಾಂಗ್ಸ್ಬರ್ಗ್ನಲ್ಲಿ ಬಿಲ್ಲು-ಬಾಣದ ದಾಳಿಯಲ್ಲಿ ಐದು ಜನರನ್ನು ಕೊಂದ 37 ವರ್ಷದ ಡ್ಯಾನಿಶ್ ಪ್ರಜೆ ಬಂಧಿತನಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆಗ್ನೇಯ ನಾರ್ವೇಜಿಯನ್ ಪಟ್ಟಣವಾದ ಕಾಂಗ್ಸ್ಬರ್ಗ್ನಲ್ಲಿ ನಡೆದ ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ, ಇದು ರಾಜಧಾನಿ ಓಸ್ಲೋದ ನೈ ರುತ್ಯ ದಿಕ್ಕಿನಲ್ಲಿ 68 ಕಿಮೀ (42 ಮೈಲಿ) ದೂರದಲ್ಲಿದೆ.
ಕಾಂಗ್ಸ್ ಬರ್ಗ್ ಪಟ್ಟಣದ ಪೊಲೀಸ್ ಮುಖ್ಯಸ್ಥರು ಅಧಿಕಾರಿಗಳು ಮತ್ತು ಹಲ್ಲೆಕೋರರ ನಡುವೆ 'ಘರ್ಷಣೆ' ನಡೆದಿದೆ ಎಂದು ಹೇಳಿದರು. ದಾಳಿ ನಡೆದ ಅಂಗಡಿಯೊಳಗೆ ಮತ್ತು ಕರ್ತವ್ಯದಲ್ಲಿರದ ಅಧಿಕಾರಿ ಸೇರಿದಂತೆ ಇನ್ನಿಬ್ಬರು ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಈ ಕೃತ್ಯ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ, ಹೆಚ್ಚಿನ ಜನರಿಗಾಗಿ ಹುಡುಕಾಟ ನಡೆಸಿಲ್ಲ. ನಮ್ಮಲ್ಲಿರುವ ಮಾಹಿತಿಯ ಆಧಾರದ ಮೇಲೆ, ಇದರ ಹಿಂದೆ ಒಬ್ಬ ವ್ಯಕ್ತಿ ಇದ್ದಾರೆ' ಎಂದು ಪೊಲೀಸ್ ಮುಖ್ಯಸ್ಥ ಓಯಿಂಗ್ ಆಸ್ ಹೇಳಿದ್ದಾರೆ.
ಹಂಗಾಮಿ ಪ್ರಧಾನಿ ಎರ್ನಾ ಸೋಲ್ಬರ್ಗ್ ಈ ದಾಳಿಯನ್ನು 'ಭೀಕರ' ಮತ್ತು ' ಕ್ರೂರ ಕೃತ್ಯ ಎಂದು ಕರೆದಿದ್ದಾರೆ. ಸಂಜೆ 6. 30 ರ ಸುಮಾರಿಗೆ ದಾಳಿಯ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು ಮತ್ತು ಸುಮಾರು 20 ನಿಮಿಷಗಳ ನಂತರ ಶಂಕಿತನನ್ನು ಬಂಧಿಸಲಾಯಿತು.