ತೈವಾನ್, ಅ 14 (DaijiworldNews/MS): ದಕ್ಷಿಣ ತೈವಾನ್ನ ಕಾಹ್ಸಿಯುಂಗ್ ನಲ್ಲಿ ಬಹುಮಹಡಿಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 46 ಮಂದಿ ಬಲಿಯಾಗಿರುವ ಘಟನೆ ನಡೆದಿದೆ.
13 ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಕಾವೊಸಿಯುಂಗ್ ನಗರದ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲಿ ಸುಮಾರು 46 ಮಂದಿ ಸಜೀವ ದಹನವಾಗಿದ್ದು ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ಕನಿಷ್ಠ 11 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಅಂಥ ಇದೇ ವೇಳೆ ಅಗ್ನಿಶಾಮಕ ಮುಖ್ಯಸ್ಥ ಲಿ ಚಿಂಗ್-ಹ್ಸಿಯು ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಂಕಿಯಿಂದ ಸುಟ್ಟು ಕರಕಲಾಗಿರುವ ಕಟ್ಟಡದ ಫೋಟೋವನ್ನು ತೈವಾನ್ನ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆ ಪ್ರಕಟಿಸಿದ್ದು, ಇಡೀ ಕಟ್ಟಡದ ಸುತ್ತ ದಟ್ಟ ಹೊಗೆ ಆವರಿಸಿದೆ.
ಅಗ್ನಿಶಾಮಕ ದಳದವರು ಇನ್ನೂ ಶೋಧ ಮತ್ತು ರಕ್ಷಣಾ ಪ್ರಯತ್ನಗಳನ್ನು ನಡೆಸುತ್ತಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಲಿ ಹೇಳಿದ್ದಾರೆ.