ಕರಾಚಿ, ಅ.18 (DaijiworldNews/PY): ಕೊರೊನಾ ಕಾರಣದಿಂದ ಸಂಪೂರ್ಣವಾಗಿ ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಆಘಾತವಾಗಿದ್ದು, ರಾಷ್ಟ್ರೀಯ ಹಣಕಾಸು ಸಂಸ್ಥೆ ಸಾಲ ನೀಡಲು ನಿರಾಕರಿಸಿದೆ.
ಆರ್ಥಿಕವಾಗಿ ಚೇತರಿಸಿಕೊಳ್ಳಲು 6 ಬಿಲಿಯನ್ ಡಾಲರ್ನ ಅವಶ್ಯಕತೆ ಇದೆ ಎಂದು ಪಾಕಿಸ್ತಾನ ಕೋರಿತ್ತು. ಕೊನೆ ಪಕ್ಷ ಮೊದಲ ಕಂತಿನಲ್ಲಿ ಒಂದು ಬಿಲಿಯನ್ ಡಾಲರ್ ನೀಡುವಂತೆ ಕೇಳಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ಹೇಳಿದೆ.
ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ಐಎಂಎಫ್ ಹಾಗೂ ಪಾಕಿಸ್ತಾನದ ಹಣಕಾಸು ಸಚಿವರೊಂದಿಗಿನ ಮಾತುಕತೆ ವಿಫಲವಾಗಿದೆ. ಪಾಕ್ನ ಹಣಕಾಸು ಸಚಿವ ಶೌಕತ್ ತರೀಕ್ ಅವರ ತಂಡ ಹಾಗೂ ಐಎಂಎಫ್ ನಡುವೆ ಅಮೇರಿಕಾದಲ್ಲಿ 11 ದಿನಗಳಿಂದು ಮಾತುಕತೆ ನಡೆಯುತ್ತಿತ್ತು. ಆದರೆ, ಮಾತುಕತೆ ವಿಫಲವಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚಕಾರ ಎತ್ತಲಿಲ್ಲ. ಈ ಕಾರಣದಿಂದ ಪಾಕಿಸ್ತಾನದ ಆರ್ಥಿಕ ವ್ಯವಸ್ಥೆ ಚೇತರಿಕೆ ಕಾಣುತ್ತಿಲ್ಲ. ಪಾಕ್ನ ಆರ್ಥಿಕ ವ್ಯವಸ್ಥೆ ವಿನಾಶದ ಅಂಚಿಗೆ ಸಾಗುತ್ತಿದೆ ಎಂದು ಐಎಂಎಫ್ ಹೇಳಿಕೆ ಬಿಡುಗಡೆ ಮಾಡಿದೆ.