ವಾಷಿಂಗ್ಟನ್, ಅ.19 (DaijiworldNews/HR): ಉದ್ಯಮಿ ನೀರವ್ ಮೋದಿ ಮತ್ತು ಅವರ ಇಬ್ಬರು ಸಹಚರ ವಿರುದ್ಧ ಹೊರಿಸಲಾದ ವಂಚನೆ ಆರೋಪಗಳನ್ನು ವಜಾ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ದಿವಾಳಿ ಸಂಬಂಧಿತ ಪ್ರಕರಣಗಳ ವಿಚಾರಣೆ ನಡೆಸುವ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ.
ನೀರವ್ ಮೋದಿ
ನೀರವ್ ಮೋದಿ ಪರೋಕ್ಷವಾಗಿ ಮಾಲೀಕತ್ವ ಹೊಂದಿದ್ದ ಕಂಪನಿಗಳಾದ -ಫೈರ್ಸ್ಟಾರ್ ಡೈಮಂಡ್, ಫ್ಯಾಂಟಸಿ ಐಎನ್ಸಿ, ಎ ಜ್ಯಾಫೆ-ಗೆ ಟ್ರಸ್ಟಿ ಆಗಿ ಕೋರ್ಟ್ ನೇಮಕ ಮಾಡಿದ್ದ ರಿಚರ್ಡ್ ಲೆವಿನ್ ಅವರು ನ್ಯೂಯಾರ್ಕ್ನ ಕೋರ್ಟ್ನಲ್ಲಿ ಮೂರು ಕಂಪನಿಗಳಿಗೆ ನೇಮಕವಾಗಿದ್ದ ಪ್ರವರ್ತಕರು ಆರೋಪ ಹೊರಿಸಿದ್ದರು.
ನೀರವ್ ಮೋದಿ ಮತ್ತವರ ಸಹಚರರಾದ ಮಿಹಿರ್ ಬನ್ಸಾಲಿ, ಅಜಯ್ ಗಾಂಧಿ ಅವರಿಂದ, ಸಾಲ ನೀಡಿದ್ದವರಿಗೆ ಪರಿಹಾರವಾಗಿ ಕನಿಷ್ಠ 15 ಮಿಲಿಯನ್ ಡಾಲರ್ ಪರಿಹಾರ ಕೊಡಿಸಬೇಕು ಎಂದು ಲೆವಿನ್ ಅವರು ಕೋರಿದ್ದರು.
ಇನ್ನು ನ್ಯಾಯಮೂರ್ತಿ ಸೀನ್ ಎಚ್ ಲೇನ್ ಅವರು ಈ ಕುರಿತು ಕಳೆದ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರಿಂದ ವಂಚನೆ ಪ್ರಕರಣ ಸಂಬಂಧ ಭಾರತದಿಂದ ಪಲಾಯನ ಮಾಡಿದ್ದು, ಸದ್ಯ ಬ್ರಿಟನ್ನಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಉದ್ಯಮಿ ನೀರವ್ ಮೋದಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.