ವಾಷಿಂಗ್ಟನ್, ಅ.22 (DaijiworldNews/HR): ಅಮೇರಿಕಾದ ಯೂನಿವರ್ಸಿಟಿಯೊಂದರಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಗುಂಡಿನ ದಾಳಿ ನಡೆದಿದ್ದು, ಇದೀಗ ಮತ್ತೆ ಅಮೇರಿಕಾದ ಟಕೋಮಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 4 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಟಕೋಮಾ ಪೊಲೀಸರು ಮಾಹಿತಿ ನೀಡಿದ್ದು , ಗುಂಡಿನ ದಾಳಿಯಲ್ಲಿ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಇನ್ನು ಟಕೋಮಾ ನಗರದ ಈಸ್ಟ್ ಸೈಡ್ ಸಮೀಪದ ಎವೆರೆಟ್ ಸ್ಟ್ರೀಟ್ ನ 4200 ಬ್ಲಾಕ್ ನಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.