ವಾಷಿಂಗ್ಟನ್, ಅ 23 (DaijiworldNews/MS): ಸಿರಿಯಾದಲ್ಲಿ ಯುಎಸ್ ಮಿಲಿಟರಿ ವೈಮಾನಿಕ ದಾಳಿಯಲ್ಲಿ ಹಿರಿಯ ಅಲ್-ಖೈದಾ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಪೆಂಟಗನ್ ಶುಕ್ರವಾರ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಹೋರಾಡುತ್ತಿರುವ ಯುಎಸ್ ನೇತೃತ್ವದ ಒಕ್ಕೂಟವು ಬಳಸುತ್ತಿದ್ದ ದಕ್ಷಿಣ ಸಿರಿಯಾದ ನೆಲೆಯ ಮೇಲೆ ದಾಳಿ ಮಾಡಿದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ
ವಾಯವ್ಯ ಸಿರಿಯಾದಲ್ಲಿ ಯುಎಸ್ ಮಿಲಿಟರಿ ವೈಮಾನಿಕ ದಾಳಿ ನಡೆಸಿ ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮಾತರ್ ಹತ್ಯೆ ಮಾಡಿದೆ ಎಂದು ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ.
"ವಾಯುವ್ಯ ಸಿರಿಯಾದಲ್ಲಿ ಇಂದು ಯುಎಸ್ ವೈಮಾನಿಕ ದಾಳಿಯು ಹಿರಿಯ ಅಲ್-ಖೈದಾ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್ ಅನ್ನು ಕೊಂದಿದೆ" ಎಂದು ಸೆಂಟ್ರಲ್ ಕಮಾಂಡ್ ವಕ್ತಾರ ಆರ್ಮಿ ಮೇಜರ್ ಜಾನ್ ರಿಗ್ಸ್ಬೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಕ್ಯೂ-9 ವಿಮಾನವನ್ನು ಬಳಸಿ ನಡೆಸಲಾದ ದಾಳಿ ಪರಿಣಾಮ ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್ ಮಾತರ್ ಹತ್ಯೆ ಮಾಡಿದ್ದು, ಯಾವುದೇ ನಾಗರಿಕ ಸಾವುನೋವುಗಳಾಗಿಲ್ಲ ಎಂದು ರಿಗ್ಸ್ಬೀ ವಿವರಿಸಿದ್ದಾರೆ.
ಈ ಅಲ್-ಖೈದಾ ಹಿರಿಯ ನಾಯಕನನ್ನು ಹತ್ಯೆ ಮಾಡುವುದರಿಂದ ಮತ್ತಷ್ಟು ಸಂಚು ರೂಪಿಸುವ ಮತ್ತು ಜಾಗತಿಕ ದಾಳಿಗಳನ್ನು ನಡೆಸುವ ಭಯೋತ್ಪಾದಕ ಸಂಘಟನೆಯ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ.