ಲಾಗೋಸ್, ಅ.26 (DaijiworldNews/HR): ಮುಂಜಾನೆ ಪ್ರಾರ್ಥನೆ ಸಲ್ಲಿಸುವ ವೇಳೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 18 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ನೈಜರ್ ರಾಜ್ಯದ ಮಶೆಗು ಸ್ಥಳೀಯ ಆಡಳಿತ ಪ್ರದೇಶ ವ್ಯಾಪ್ತಿಯಲ್ಲಿರುವ ಮಜಕುಕಾ ಗ್ರಾಮದಲ್ಲಿರುವ ಮಸೀದಿಯೊಂದರಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಸಿದವರನ್ನು ಜನಾಂಗೀಯ ಫುಲಾನಿ ಅಲೆಮಾರಿ ಕುರಿಗಾಹಿಗಳು ಎಂದು ಶಂಕಿಸಲಾಗಿದ್ದು, ಹಂತಕರು ಪರಾರಿಯಾಗಿದ್ದಾರೆ.
ಇನ್ನು ಬಂದೂಕುಧಾರಿಗಳು ಮಸೀದಿಯ ಸುತ್ತಲೂ ಸುತ್ತುವರಿದು, ಗುಂಡು ಹಾರಿಸಲು ಪ್ರಾರಂಭಿಸಿದ್ದು, ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಮಶೆಗು ಸ್ಥಳೀಯ ಆಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್ ಇಸಾ ಮಾಹಿತಿ ನೀಡಿದ್ದಾರೆ.
ನೈಜರ್ ರಾಜ್ಯದ ಪೊಲೀಸ್ ಆಯುಕ್ತ ಕುರ್ಯಾಸ್, "ಮಜುಕುಕಾ ಗ್ರಾಮಸ್ಥರು ಮತ್ತು ಫುಲಾನಿ ಮುಖಂಡರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ" ಎಂದು ಹೇಳಿದ್ದಾರೆ.