ಜಕರ್ತಾ,ಅ 26 (DaijiworldNews/MS): ಇಂಡೋನೇಷ್ಯಾದ ರಾಷ್ಟ್ರಪಿತ ಎಂದೇ ಕರೆಯಲ್ಪಡುವ ಅಲ್ಲಿನ ಮೊದಲ ಅಧ್ಯಕ್ಷ ಸುಕರ್ನೊ ಅವರ ಪುತ್ರಿ 69 ವರ್ಷದ ಸುಕ್ಮಾವತಿ ಸುಕರ್ನೊಪುತ್ರಿ ಅವರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಸ್ವಯಿಚ್ಛೆಯಿಂದ ಮತಾಂತರಗೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅ. 26 ರಂದು ನಡೆಯುವ ಹಿಂದೂ ಸಮಾರಂಭದಲ್ಲಿ ಸುಧಿ ವಡಾನಿ ಅವರು ಹೊಸ ನಂಬಿಕೆಯನ್ನು ಸ್ವೀಕರಿಸುವುದಾಗಿ ಸುಕ್ಮಾವತಿ ಹೇಳಿದ್ದಾರೆ.
ಸುಕ್ಮಾವತಿ ಅವರು ಈ ನಿರ್ಧಾರ ಕೈಗೊಳ್ಳುವುದಕ್ಕೆ ಅವರ ಅಜ್ಜಿಯ ಪ್ರಭಾವ ಕಾರಣ ಎಂದು ಅವರು ಹೇಳಿದ್ದಾರೆ. ದಿವಂಗತರಾಗಿರುವ ಅವರ ಅಜ್ಜಿಯ ಚಿಂತನೆಗಳು, ಬೋಧನೆಗಳು ತಮ್ಮ ಮೇಲೆ ಪ್ರಭಾವ ಬೀರಿದ್ದು, ಅದರಿಂದಾಗಿಯೇ ತಾವು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಸುಕ್ಮಾವತಿ ಅವರು ಇಂಡೋನೇಷಿಯನ್ ನ್ಯಾಷನಲ್ ಪಾರ್ಟಿ (ಪಾರ್ಟೈ ನ್ಯಾಶನಲ್ ಇಂಡೋನೇಷಿಯಾ-ಪಿಎನ್ಐ) ಸ್ಥಾಪಕರಾಗಿದ್ದಾರೆ. ಕಾಂಜೆಂಗ್ ಗುಸ್ತಿ ಪಾಂಗೇರನ್ ಅದಿಪತಿ ಆರ್ಯ ಮಂಕುನೆಗರ IX ಅವರನ್ನು ವಿವಾಹವಾದರು, ಸುಕ್ಮಾವತಿ 1984 ರಲ್ಲಿ ವಿಚ್ಛೇದನ ಪಡೆದರು.
ಸುಕ್ಮಾವತಿ ಅವರು ಸುಕರ್ನೊ ಅವರ ಮೂರನೇ ಮಗಳಾಗಿದ್ದಾರೆ ಮತ್ತು ಮಾಜಿ ಅಧ್ಯಕ್ಷ ಮೆಗಾವತಿ ಸುಕರ್ಣೋಪುತ್ರಿ ಅವರ ತಂಗಿಯಾಗಿದ್ದು ಸುಕ್ಮಾವತಿ ಅವರಿಗೆ ಹಿಂದೂ ಧರ್ಮದ ಬಗ್ಗೆ ಆಳವಾದ ಪಾಂಡಿತ್ಯವಿದೆ ಎಂದು ಅವರ ಸಹವರ್ತಿಗಳು ಹೇಳುತ್ತಾರೆ.
ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿ ದೊಡ್ಡ ಧರ್ಮವಾಗಿದ್ದು ಇಡೀ ವಿಶ್ವದಲ್ಲೇ ಮುಸ್ಲಿಮರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಹಿಂದೂ ಧರ್ಮೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.