ಬಾಗ್ದಾದ್, ಅ.27 (DaijiworldNews/PY): "ಬಾಗ್ದಾದ್ನ ಈಶಾನ್ಯ ಭಾಗದಲ್ಲಿರುವ ಹಳ್ಳಿಯ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿಗೆ ಸೇರಿದ ಉಗ್ರರು ದಾಳಿ ನಡೆಸಿದ್ದು, 11 ನಾಗರಿಕರು ಸಾವನ್ನಪ್ಪಿ, 6 ಮಂದಿ ಗಾಯಗೊಂಡಿದ್ದಾರೆ" ಎಂದು ಇರಾಕ್ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
"ಬಹುಸಂಖ್ಯಾತರಿರುವ ಅಲ್-ರಶಾದ್ನ ಗ್ರಾಮದ ಮೇಲೆ ಮೆಶಿನ್ ಗನ್ಗಳಿಂದ ಈ ದಾಳಿ ನಡೆದಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಇಬ್ಬರು ಗ್ರಾಮಸ್ಥರನ್ನು ಐಸಿಸ್ ಉಗ್ರರು ಅಪಹರಿಸಿದ್ದರು. ಈ ವೇಳೆ ಭಾರಿ ಹಣ ಕೇಳದ ಅವರ ಬೇಡಿಕೆ ಈಡೇರದೇ ಇದ್ದ ಕಾರಣ ಹಳ್ಳಿಯ ಮೇಲೆ ದಾಳಿ ನಡೆಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇರಾಕ್ನಲ್ಲಿ ಐಸಿಸ್ 2017ರಲ್ಲಿ ಸೋತ ನಂತರ ನಾಗರಿಕರ ಮೇಲಿನ ದಾಳಿಗಳು ಅಪರೂಪವಾಗಿದ್ದವು. ಈ ಉಗ್ರರು ಸುನ್ನಿ ಸಮುದಾಯಕ್ಕೆ ಸೇರಿದವರಾಗಿದ್ದು, ಭದ್ರತಾ ಪಡೆಗಳು ಸೇರಿದಂತೆ, ವಿದ್ಯುತ್ ಸ್ಥಾವರಗಳು, ಇತರ ಮೂಲಸೌಲಭ್ಯಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದ್ದರು.
ಬಾಗ್ದಾದ್ನಲ್ಲಿ ಜುಲೈ ತಿಂಗಳಿನಲ್ಲಿ ರಸ್ತೆ ಬದಿಯಲ್ಲಿ ಇಟ್ಟಿದ್ದ ಬಾಂಬ್ ಸ್ಪೋಟಿಸಿ 30 ಜನ ಸಾವನ್ನಪ್ಪಿದ್ದರು. ಜನವರಿಯಲ್ಲಿ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 32 ಮಂದಿ ಸಾವನ್ನಪ್ಪಿದ್ದಾರೆ.