ಸಿಯೋಲ್, ಅ.28 (DaijiworldNews/PY): ದೇಶದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು ಎದುರಿಸುವಂತಾಗಿದ್ದು, 2025ರವರೆಗೆ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು ಎಂದು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.
ದೇಶದಲ್ಲಿ ಆಹಾರ ಬಿಕ್ಕಟ್ಟು ಎದುರಾದ ಹಿನ್ನೆಲೆ ಅಧಿಕಾರಿಗಳು ಕೃಷಿ ಉತ್ಪಾದನೆಯನ್ನು ಹೆಚ್ಚಳ ಮಾಡಲು ಮಾರ್ಗೋಪಾಯ ಕಂಡುಹಿಡಿಯಬೇಕು ಎಂದು ಕಿಮ್ ಮನವಿ ಮಾಡಿಕೊಂಡಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
2025ರಲ್ಲಿ ಚೀನಾದೊಂದಿಗೆ ಗಡಿಯನ್ನು ಪುನರಾರಂಭಿಸುವವರೆಗ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು ಎಂದು ಕಿಮ್ ಜಾಂಗ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಉತ್ತರ ಕೊರಿಯಾದ ಜನರಿಗೆ ಆಹಾರದ ಕೊರೆತೆ ಎದುರಾಗಿದೆ. 2025ರವರೆಗೆ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಒಂದೆಡೆ ಚೀನಾದೊಂದಿಗಿನ ವ್ಯಾಪಾರ, ವಹಿವಾಟು ಬಂದ್ ಮಾಡಿದ್ದು, ಇನ್ನೊಂದೆಡೆ ಉತ್ತರಕೊರಿಯಾದಲ್ಲಿ ಬಿರುಗಾಳಿ ಹಾಗೂ ಪ್ರವಾಹದ ಪರಿಣಾಮ ಬೆಳೆಗಳು ನಾಶವಾದ ಕಾರಣ ಆಹಾರ ಬಿಕ್ಕಟ್ಟು ಎದುರಾಗಿದೆ ಎಂದು ವರದಿ ಹೇಳಿದೆ.