ಕಾಬೂಲ್, ಅ.31 (DaijiworldNews/HR): ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ತಾಲಿಬಾನ್ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡ್ಜಾದಾ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಖುಂಡ್ಜಾದಾ 2016 ರಿಂದ ತಾಲಿಬಾನ್ ನ ಇಸ್ಲಾಮಿಕ್ ಚಳುವಳಿಯ ಆಧ್ಯಾತ್ಮಿಕ ಮುಖ್ಯಸ್ಥನಾಗಿದ್ದು, ಸಾರ್ವಜನಿಕರ ಕಣ್ಣಿನಿಂದ ಕಾಣೆಯಾಗಿದ್ದ. ಆಗಸ್ಟ್ ನಲ್ಲಿ ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಲೂ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಇನ್ನು ಹೈಬತುಲ್ಲಾ ಅಖುಂಡ್ಜಾದಾ ತಾಲಿಬಾನ್ ಸರ್ಕಾರದಲ್ಲಿ ಅದರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಖುಂದ್ಜಾದಾ ಸಾವಿನ ವದಂತಿಗಳು ಕಾಣಿಸಿಕೊಂಡ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡು ಬೆಂಬಲಿಗರೊಂದಿಗೆ ಮಾತನಾಡಿದ್ದಾನೆ.