ಕಾಬೂಲ್, ನ 04 (DaijiworldNews/MS): ರಾಜಧಾನಿ ಕಾಬೂಲ್ನಲ್ಲಿರುವ ಅಫ್ಘಾನಿಸ್ತಾನದ ಅತಿದೊಡ್ಡ ಮಿಲಿಟರಿ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದು, ಸುಮಾರು 43 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ತಿಳಿಸಿದೆ.
ಮಂಗಳವಾರ ಎರಡು ಸ್ಫೋಟಗಳು ಸರ್ದಾರ್ ಮೊಹಮ್ಮದ್ ದೌದ್ ಖಾನ್ ಮಿಲಿಟರಿ ಆಸ್ಪತ್ರೆಯ ಪ್ರವೇಶದ್ವಾರವನ್ನು ಸಂಭವಿಸಿದ್ದು, ಇದಾದ ತಕ್ಷಣವೇ ಭಾರೀ ಗುಂಡಿನ ದಾಳಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯ ಮಧ್ಯಭಾಗದಲ್ಲಿ ನಡೆದ ಬಂದೂಕು ಮತ್ತು ಬಾಂಬ್ ದಾಳಿಯ ಹೊಣೆಯನ್ನು ಯಾರು ಹೊತ್ತುಕೊಂಡಿಲ್ಲ, ಆದರೆ ತಾಲಿಬಾನ್ ವಕ್ತಾರರು ಘಟನೆಯ ಹಿದೆ ಐಎಸ್ ಐ ಎಲ್ ಅಂಗಸಂಸ್ಥೆಯ ಕೈವಾಡ ಇದೆ ಎಂದು ದೂಷಿಸಿದ್ದಾರೆ.
"ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡನು. ಆತ್ಮಹತ್ಯಾ ಬಾಂಬರ್ ಮತ್ತು ಬಂದೂಕುಧಾರಿಗಳಿಂದ ದಾಳಿ ನಡೆಸಲಾಗಿದೆ "ಎಂದು ತಾಲಿಬಾನ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ .