ಲಂಡನ್, ನ. 4 (DaijiworldNews/HR): ದಕ್ಷಿಣ ಆಫ್ರಿಕಾದ ವರ್ಣಭೇದ ಇತಿಹಾಸದ ಬಗ್ಗೆ ಬಿಳಿಯ ಕುಟುಂಬದ ಎಣಿಕೆ ಕುರಿತ 'ದ ಪ್ರಾಮಿಸ್' ಕೃತಿಗಾಗಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದಕ್ಷಿಣ ಆಫ್ರಿಕಾ ಲೇಖಕ ಡೆಮನ್ ಗಾಲ್ಗಟ್ ಅವರಿಗೆ ಲಭಿಸಿದೆ.
ಸುಮಾರು 69 ಸಾವಿರ ಡಾಲರ್ ಮೌಲ್ಯದ ಈ ಪ್ರಶಸ್ತಿಗೆ ಗಾಲ್ಗಟ್ ಅವರು ಬ್ರಿಟಿಶ್ ಬುಕ್ಮೇಕರ್ಗಳ ಫೇವರಿಟ್ ಆಗಿದ್ದರು.
ಗಾಲ್ಗಟ್ ಅವರು ಮೂರನೇ ಬಾರಿಗೆ ಫೈನಲಿಸ್ಟ್ ಆಗಿ ಹೊರಹೊಮ್ಮಿ ಈ ಬಾರಿ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಸ್ತಕ ನಿರ್ಣಯಗಾರರು ಈ ಕೃತಿಯನ್ನು 'ಟೂರ್ ಡೆ ಫೋರ್ಸ್' ಎಂದು ಬಣ್ಣಿಸಿದ್ದಾರೆ.
ಈ ಹಿಂದೆ ಗಾಲ್ಗಟ್ ಅವರ 'ದ ಗುಡ್ ಡಾಕ್ಟರ್' 2003ರಲ್ಲಿ ಹಾಗೂ 'ಇನ್ ಎ ಸ್ಟ್ರೇಂಜ್ ರೂಮ್' 2010ರಲ್ಲಿ ನಾಮನಿರ್ದೇಶನಗೊಂಡಿತ್ತು. ಆದರೆ ಎರಡೂ ಬಾರಿ ಪ್ರಶಸ್ತಿಯೂ ಅವರಿಗೆ ಸಿಕ್ಕಿರಲಿಲ್ಲ.