ನೈಜೀರಿಯಾ, ನ.09 (DaijiworldNews/HR): ಚಿನ್ನದ ಗಣಿ ಕುಸಿದು 18 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನೈಜೀರಿಯಾದ ಗಡಿಯ ಸಮೀಪ ದಕ್ಷಿಣ ನೈಜರ್ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ನೈಜೀರಿಯನ್ ಪ್ರಜೆಗಳೂ ಇದ್ದಾರೆ ಎಂದು ಡಾನ್-ಇಸ್ಸಾ ಜಿಲ್ಲೆಯ ಮೇಯರ್ ಆಡಮೌ ಗುರೌ ಮಾಹಿತಿ ನೀಡಿದ್ದಾರೆ.
ಇನ್ನು "ಪಾರುಗಾಣಿಕಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿದ್ದು, ಹೊಂಡಗಳ ಕೆಳಭಾಗದಲ್ಲಿ ಇನ್ನೂ ದೇಹಗಳು ಸಿಕ್ಕಿಹಾಕಿಕೊಂಡಿರಬಹುದು" ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ಮಣ್ಣಿನ ಅಸ್ಥಿರತೆ ಮತ್ತು ಗಣಿಗಾರರು ಬಳಸುತ್ತಿರುವ ಹಳತಾದ ವಿಧಾನಗಳಿಂದಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.