ನ್ಯೂಜಿಲೆಂಡ್, ನ 10 (DaijiworldNews/MS): ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಲೈವ್ಸ್ಟ್ರೀಮ್ ಮೂಲಕ ದೇಶವನ್ನುದ್ದೇಶಿಸಿ, ಮಾತನಾಡುವುದರಲ್ಲಿ ನಿರತರಾಗಿದ್ದಾಗ, ದೇಶದ ಪ್ರಥಮ ಪ್ರಜೆಗೆ "ಏನು ಇಷ್ಟು ಸಮಯ ತೆಗೆದುಕೊಳ್ಳುತ್ತಿ, ಬಾ " ಎಂಬ ಆದೇಶ ನೀಡಲಾಗಿದೆ.
ಹೌದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಈ ಆದೇಶ ನೀಡಿದ್ದು ಅವರ ಮೂರು ವರ್ಷದ ಮಗಳು ’ನೀವ್’... ತಾಯಿಯೂ, ಪ್ರಧಾನಿಯೂ ಆಗಿರುವ ಜಸಿಂಡಾ ಅರ್ಡೆರ್ನ್, " ಕೋವಿಡ್ ಹಿನ್ನಲೆಯಲ್ಲಿ ದೇಶದ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಬದಲಾಯಿಸುವ ಕುರಿತು ಪ್ರಧಾನಮಂತ್ರಿ ಲೈವ್ಸ್ಟ್ರೀಮ್ ನಡೆಸುತ್ತಿದ್ದಾಗ ಆಕೆಯ ಮಗಳು ನೀವ್ನ ಮೆಲು ಧ್ವನಿಯಿಂದ ಅವರ ಭಾಷಣಕ್ಕೆ ಅಡ್ಡಿಯಾಯಿತು. ಅದರೂ ಸಂಭಾಳಿಸಿಕೊಂಡು ನಗುನಗುತ್ತಲೇ ಮಗುವಿಗೆ ಉತ್ತರಿಸಿದ್ದಾರೆ.
"ಮಗು ನೀವು ಮಲಗುವ ಸಮಯವಲ್ಲವೇ ಇದು..ನೀವು ಹಾಸಿಗೆಯಲ್ಲಿರಬೇಕು ..ನಾನು ಒಂದು ಇನ್ನೆರಡು ನಿಮಿಷದಲ್ಲಿ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದು ಉತ್ತರಿಸಿ, ವೀಕ್ಷಕರಿಗೆ " ಆಕೆ ಮಲಗುವ ಸಮಯ ಮಾತುಕತೆ ನಡೆಸಲು ಉತ್ತಮ ಅಂದುಕೊಂಡೆ ಆದರೆ, ಯಾರಾದರೂ ಮಕ್ಕಳು ಮಲಗುವ ಸಮಯದಿಂದ ಮೂರು ಅಥವಾ ನಾಲ್ಕು ಬಾರಿ ತಪ್ಪಿಸಿಕೊಳ್ಳುತ್ತಾರೆಯೇ? ಅದೃಷ್ಟವಶಾತ್, ಸಹಾಯಕ್ಕಾಗಿ ನನ್ನ ತಾಯಿ ಇಲ್ಲಿದ್ದಾರೆ ಆದ್ದರಿಂದ ಅವರು ಸಹಾಯ ಮಾಡಬಹುದು"ಎಂದು ಹೇಳಿ " ಸರಿ, ನಾವು ಎಲ್ಲಿದ್ದೆವು?" ಅರ್ಡೆರ್ನ್ ಭಾಷಣವನ್ನು ಮುಂದುವರೆಯಲು ಪ್ರಯತ್ನಿಸಿದ್ದಾರೆ.
ಮತ್ತೆ ಸಣ್ಣ ಧ್ವನಿ "ಏನು ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ಎಂದು ಮರು ಪ್ರಶ್ನೆ ಎಸೆದಿದ್ದಾಳೆ . "ನನ್ನನ್ನು ಕ್ಷಮಿಸಿ, ಡಾರ್ಲಿಂಗ್ , ಇದು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ" ಎಂದು ಹೇಳಿ ವೀಕ್ಷಕರಿಗೆ ಸರಿ. ನನ್ನನ್ನು ಕ್ಷಮಿಸಿ, ಎಲ್ಲರೂ. ನಾನು ಹೋಗಿ ನೀವ್ ಅನ್ನು ಮಲಗಿಸಲು ಪ್ರಯತ್ನಿಸುತ್ತೇನೆ . ಏಕೆಂದರೆ ಇದು ಅವಳ ಮಲಗುವ ಸಮಯವನ್ನು ಮೀರಿದೆ ಎಂದು ಹೇಳಿದ್ದಾರೆ.