ವಾಷಿಂಗ್ಟನ್, ನ.12 (DaijiworldNews/PY): ಹೆಚ್-1ಬಿ ವೀಸಾ ಹೊಂದಿರುವವರ ಪತ್ನಿಗೆ, ಉದ್ಯೋಗ ಪರವಾನಗಿ ಒದಗಿಸುವ ಸ್ವಯಂಚಾಲಿತ ವ್ಯವಸ್ಥೆಯನ್ನು ಜಾರಿ ಮಾಡಲು ಅಮೇರಿಕಾದ ಸರ್ಕಾರ ಅನುಮತಿಸಿದೆ.
ಇದೊಂದು ವಲಸೆ-ಸ್ನೇಹಿ ಕ್ರಮವಾಗಿದ್ದು, ಅಸಂಖ್ಯ ಸಂಖ್ಯೆಯಲ್ಲಿರುವ ಮಹಿಳೆಯರಿಗೆ ಈ ಸೌಲಭ್ಯದಿಂದ ಅನುಕೂಲವಾಗಲಿದೆ. ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ವೃತ್ತಿಪರರಾದ ಭಾರತೀಯ-ಅಮೇರಿಕನ್ ಮಹಿಳೆಯರಿಗೆ ಈ ಸೌಲಭ್ಯದಿಂದ ಅನುಕೂಲವಾಗಲಿದೆ.
ಹೆಚ್-1ಬಿ ವೀಸಾದಿಂದ ಅಮೇರಿಕಾದ ಕಂಪೆನಿಗಳು ವಿದೇಶಿ ನೌಕರರನ್ನು ಮುಖ್ಯವಾಗಿ ಪ್ರಾಯೋಗಿಕ ಹಾಗೂ ತಾಂತ್ರಿಕ ಪರಿಣತ ಕ್ಷೇತ್ರಗಳಲ್ಲಿ ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡಲಿವೆ. ಪ್ರತಿ ಹತ್ತು ವರ್ಷ ಭಾರತ ಹಾಗೂ ಚೀನಾದಿಂದ 10 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ತಂತ್ರಜ್ಞಾನ ಆಧರಿತ ಕಂಪೆನಿಗಳು ಇದನ್ನು ಅವಲಂಬಿಸಿವೆ.
ಹೆಚ್-1ಬಿ ವೀಸಾ ಹೊಂದಿರುವವರ ಕುಟುಂಬದ ಸದಸ್ಯರಿಗೆ ಹೆಚ್-1ಬಿ ವೀಸಾವನ್ನು ಅಮೇರಿಕಾದ ಪೌರತ್ವ ಹಾಗೂ ವಲಸೆ ಸೇವೆಗಳ ಸಂಸ್ಥೆ ನೀಡಲಿದೆ. ಅಮೇರಿಕಾದಲ್ಲಿ ಇದನ್ನು ಸಾಮಾನ್ಯವಾಗಿ ಉದ್ಯೋಗಾಧಾರಿತ ಕಾನೂನುಬದ್ಧ ಕಾಯಂ ನಿವಾಸಿ ಸ್ಥಾನಮಾನ ಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದವರಿಗೆ ನೀಡಲಾಗುತ್ತದೆ.