ಕ್ವಿಟೊ, ನ.14 (DaijiworldNews/PY): ದಕ್ಷಿಣ ಅಮೇರಿಕಾ ಖಂಡದ ದೇಶವಾಗಿರುವ ಈಕ್ವಡೋರ್ನ ಕರಾವಳಿ ನಗರ ಗಯಾಕ್ವಿನ್ನಲ್ಲಿರುವ ಅತಿದೊಡ್ಡ ಜೈಲಿನಲ್ಲಿ ಗುಂಡಿನ ಕಾಳಗ ನಡೆದಿದ್ದು, 68 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಗಯಾಸ್ ಪ್ರಾಂತ್ಯದ ಗವರ್ನರ್ ಪಬ್ಲೋ ಅರಸೊಮೆನ ಈ ಬಗ್ಗೆ ಮಾಹಿತಿ ನೀಡಿದ್ದು, "ಅಂತರಾಷ್ಟ್ರೀಯ ಡ್ರಗ್ಸ್ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಿಗಳ ನಡುವಿನ ಗ್ಯಾಂಗ್ವಾರ್ ಹಿನ್ನೆಲೆ ಈ ಗುಂಡಿನ ಕಾಳಗ ನಡೆದಿದೆ" ಎಂದಿದ್ದಾರೆ.
ಈ ಗುಂಡಿನ ಕಾಳಗ ಶನಿವಾರ ಆರಂಭವಾಗಿದ್ದು, ಇದನ್ನು ನಿಯಂತ್ರಿಸಲು 700ರಷ್ಟು ಪೊಲೀಸರು ಯತ್ನಿಸುತ್ತಿದ್ದಾರೆ. ಆದರೆ, ಇದು ಇನ್ನೂ ಕೂಡಾ ನಿಯಂತ್ರಣಕ್ಕೆ ಬಂದಿಲ್ಲ. ಇದೇ ಜೈಲಿನಲ್ಲಿ ಸೆಪ್ಟೆಂಬರ್ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 119 ಮಂದಿ ಸಾವನ್ನಪ್ಪಿದ್ದರು.