ಅಸ್ವಾನ್, ನ 15 (DaijiworldNews/MS): ಈಜಿಪ್ಟ್ನ ದಕ್ಷಿಣ ನಗರವಾದ ಅಸ್ವಾನ್ನಲ್ಲಿ ಚೇಳಿನ ಹಿಂಡು ದಾಳಿ ಇಟ್ಟಿದ್ದು, ಇದು ಕುಟುಕಿದ ಕಾರಣ ಮೂರು ಜನರನ್ನು ಸಾವನ್ನಪ್ಪಿದ್ದು ಸುಮಾರು 500 ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯ ಬಳಿಕ ಚೇಳಿನ ಹಿಂಡುಗಳೇ ದಾಳಿ ಇಡಲಾರಂಭಿಸಿದ್ದು ಸ್ಥಳೀಯ ಜನತೆ ಚೇಳಿನ ದಾಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
"ಈಗಾಗಲೇ 89 ಜನರನ್ನು ಅಸ್ವಾನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನೂರಾರು ಜನರು ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಚೇಳು ಕಡಿತಕ್ಕೆ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯರನ್ನು ರಜೆಯಿಂದ ಹಿಂಪಡೆಯಲಾಗಿದೆ ಆಂಟಿ-ವೆನಮ್ನ ಹೆಚ್ಚುವರಿ ಪ್ರಮಾಣಗಳನ್ನು ಹೆಚ್ಚು ದೂರದ ಸ್ಥಳಗಳಲ್ಲಿರುವ ವೈದ್ಯಕೀಯ ಕೇಂದ್ರಗಳಿಗೆ ಹಂಚಲಾಗಿದೆ" ಎಂದು ಆರೋಗ್ಯ ಸಚಿವಾಲಯದ ಪ್ರತಿನಿಧಿಯು ಈಜಿಪ್ಟ್ನ ಅಲ್-ಅಹ್ರಾಮ್ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಮನೆಯಿಂದ ದೂರವಿರಲು ಮತ್ತು ಹೆಚ್ಚಿನ ಮರಗಳಿರುವ ಸ್ಥಳಗಳ ಬಳಿ ಓಡಾಟ ನಡೆಸದಂತೆ ಸೂಚಿಸಲಾಗಿದೆ. ಅಧಿಕಾರಿಗಳು ತಾತ್ಕಾಲಿಕವಾಗಿ ರಸ್ತೆ ಮತ್ತು ಪ್ರಯಾಣಗಳನ್ನು ನಿರ್ಬಂಧಿಸಿದ್ದು ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ
ಈಜಿಪ್ಟ್ನ ದಪ್ಪ-ಬಾಲದ ಚೇಳುಗಳನ್ನು ವಿಶ್ವದ ಅತ್ಯಂತ ಮಾರಣಾಂತಿಕವಾದ ಚೇಳುಗಳೆಂದು ಪರಿಗಣಿಸಲಾಗಿದೆ. ಉಬ್ಬಿದ ಬಾಲದ ವಿಷವು ಚಿಕಿತ್ಸೆ ನೀಡದೆ ಬಿಟ್ಟರೆ ಒಂದು ಗಂಟೆಯೊಳಗೆ ಮನುಷ್ಯರನ್ನು ಕೊಲ್ಲುತ್ತದೆ.