ಕಾಬೂಲ್, ನ.15 (DaijiworldNews/PY): "ಭಾರತ ಸೇರಿ ಯಾವುದೇ ದೇಶದೊಂದಿಗೆ ಅಫ್ಗಾನಿಸ್ತಾನ ಸಂಘರ್ಷ ಬಯಸುವುದಿಲ್ಲ" ಎಂದು ತಾಲಿಬಾನ್ ನೇತೃತ್ವದ ಹಂಗಾಮಿ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ತಿಳಿಸಿದ್ದಾರೆ.
ಭಾರತ ಹಾಗೂ ಅಫ್ಗಾನಿಸ್ತಾನದ ನಡುವಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಅವರು, "ಬೇರೆ ಯಾವುದೇ ಸೇಶದೊಂದಿಗೆ ಸಂಘರ್ಷವನ್ನು ಹೊಂದಲು ಅಥವಾ ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರುವ ಸವಾಲನ್ನು ಹೊಂದಲು ಅಫ್ಗಾನ ಇಚ್ಛಿಸುವುದಿಲ್ಲ" ಎಂದಿದ್ದಾರೆ.
"ನಾವು ಮಾಸ್ಕೋ ಸಮ್ಮೇಳನದಲ್ಲಿ ಭಾಗವಹಿಸಿದಾಗ, ಭಾರತ, ಪಾಕಿಸ್ತಾನ ಸೇರಿದಂತೆ ಹಲವಾರು ಇತರ ದೇಶಗಳ ಪ್ರತಿನಿಧಿಗಳೂ ಭಾಗಿಯಾಗಿದ್ದರು. ನಾವು ಯಾವುದೇ ದೇಶವನ್ನು ವಿರೋಧಿಸುವುದಿಲ್ಲ" ಎಂದು ತಿಳಿಸಿದ್ದಾರೆ.
ಮಹಿಳಾ ಶಿಕ್ಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರು ಶೇ.100ರಷ್ಟು ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ಅವರು ತೊಡಗಿಸಿಕೊಂಡಿದ್ದಾರೆ" ಎಂದಿದ್ದಾರೆ.
ತುರ್ಕಮೆನಿಸ್ತಾನ್, ಇರಾನ್, ಕಿರ್ಗಿಜ್ ರಿಪಬ್ಲಿಕ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ತಜಕಿಸ್ತಾನ್ ಹಾಗೂ ರಷ್ಯಾದ ಅಧಿಕಾರಗಳ ಜೊತೆ ಅಫ್ಗಾನಿಸ್ತಾನದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ನಡೆದ ಮಾತುಕತೆಯ ಬಳಿ ಅಮೀರ್ ಖಾನ್ ಮುತ್ತಕಿ ಜೊತೆ ಸಂದರ್ಶನ ನಡೆಸಲಾಗಿದೆ.