ಸಿಂಗಾಪುರ, ನ.17 (DaijiworldNews/PY): ಮಾದಕ ವಸ್ತು ಸಾಗಣೆ ಆರೋಪದ ಹಿನ್ನೆಲೆ ಮಲೇಷ್ಯಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೋರ್ವರಿಗೆ ಸಿಂಗಾಪುರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನು ಸ್ವಚ್ಚತಾ ಮೇಲ್ಚಿಚಾರಕ ಮನಸಾಮಿ ರಾಮಮೂರ್ತಿ(39) ಎಂದು ಗುರುತಿಸಲಾಗಿದೆ. ಈತ ದೋಷಿ ಎಂದು ಇತ್ತೀಚೆಗೆ ಸಿಂಗಾಪುರ ಹೈಕೋರ್ಟ್ ತೀರ್ಪು ನೀಡಿತ್ತು.
ರಾಮಮೂರ್ತಿ 2018ರಲ್ಲಿ ಮಾದಕ ವಸ್ತುಗಳು ತುಂಬಿದ್ದ ಚೀಲದೊಂದಿಗೆ ಸಿಕ್ಕಿಬಿದ್ದಿದ್ದ. ಪರಿಶೀಲನೆಯ ಸಂದರ್ಭ 57.54 ಗ್ರಾಂ ತೂಕದ ಹೆರಾಯಿನ್ ಪತ್ತೆಯಾಗಿತ್ತು. ಹಾರ್ಬರ್ಫ್ರಂಟ್ ಅವೆನ್ಯೂದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ನಲ್ಲಿ ಮಾದಕ ವಸ್ತುಗಳು ತುಂಬಿದ ಚೀಲದೊಂದಿಗೆ ಅವರು ಸಿಕ್ಕಿಬಿದ್ದಿದ್ದರು ಎಂದು ವರದಿ ತಿಳಿಸಿದೆ.
ನ್ಯಾಯಮೂತಿ ಔಡ್ರೆ ಲಿಮ್ ಅವರು ನೀಡಿದ ಲಿಖಿತ ಆದೇಶದಲ್ಲಿ ರಾಮಸ್ವಾಮಿಗೆ ಶಿಕ್ಷೆ ವಿಧಿಸುವ ತೀರ್ಮಾನವನ್ನು ತಿಳಿಸಿದ್ದಾರೆ.
15 ಗ್ರಾಂ ಗಿಂತ ಅಧಿಕ ಹೆರಾಯಿನ್ ಸಾಗಾಣೆ ಮಾಡಿದ್ದಲ್ಲಿ ಮರಣದಂಡಣೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.