ಇಸ್ಲಾಮಾಬಾದ್, ನ.19 (DaijiworldNews/PY): "ಉಗ್ರವಾದಕ್ಕೆ ದೇಶದಲ್ಲಿ ಬೇರು ಬಿಟ್ಟಿರುವ ಧಾರ್ಮಿಕ ಶಾಲಾ-ಕಾಲೇಜುಗಳೇ ಕಾರಣ. ಮದರಸವಲ್ಲ" ಎಂದು ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ ತಿಳಿಸಿದ್ದಾರೆ.
ಭಯೋತ್ಪಾದನೆ ಬಗ್ಗೆ ನಗರದಲ್ಲಿ ನಡೆದ ಸಮಾಲೋಚನಾ ಸಮಾವೇಶದಲ್ಲಿ ಮಾತನಾಡಿದ ಅವರು, "ಪಾಕಿಸ್ತಾನಕ್ಕೆ ಭಾರತ, ಯುಎಸ್ ಅಥವಾ ಇನ್ಯಾವ ದೇಶದಿಂದಲೂ ಬೆದರಿಕೆ ಇಲ್ಲ. ಆದರೆ, ದೇಶದೊಳಗಿನ ಧಾರ್ಮಿಕ ಉಗ್ರವಾದದಿಂದ ಅಪಾಯ ಎದುರಾಗಿದೆ" ಎಂದಿದ್ದಾರೆ.
"ನಮಗೆ ಭಾರತದಿಂದ ಯಾವುದೇ ಸಂಭಾವ್ಯ ಅಪಾಯಗಳಿಲ್ಲ. ವಿಶ್ವದಲ್ಲೇ ನಾವು ಆರನೇ ಬಲಿಷ್ಠ ಸೇನೆಯನ್ನು ಹೊಂದಿದ್ದೇವೆ. ಪರಮಾಣು ಶಕ್ತಿಯನ್ನು ಕೂಡಾ ಹೊಂದಿದ್ದೇವೆ. ನಮ್ಮೊಂದಿಗೆ ಭಾರತ ಸ್ಪರ್ಧಿಸಲಾರದು. ನಮಗೆ ದೇಶದೊಳಗೆಯೇ ಅತಿದೊಡ್ಡ ಅಪಾಯ ಎದುರಾಗಿದೆ" ಎಂದು ಹೇಳಿದ್ದಾರೆ.
"ಪಾಕ್ನ ಪ್ರದೆಶಗಳು ಹಿಂದೆಂದೂ ಧಾರ್ಮಿಕ ಉಗ್ರವಾದವನ್ನು ಹೊಂದಿರಲಿಲ್ಲ. ಆದರೆ, ಸದ್ಯ ಗೋಚರವಾಗುತ್ತಿದೆ" ಎಂದಿದ್ದಾರೆ.