ಅಫ್ಘಾನಿಸ್ತಾನ, ನ.22 (DaijiworldNews/HR): ತಾಲಿಬಾನ್ ಅಧಿಕಾರಿಗಳು ಅಫ್ಘಾನಿಸ್ತಾನದಲ್ಲಿ ಹೊಸ ''ಧಾರ್ಮಿಕ ಮಾರ್ಗಸೂಚಿ''ಯನ್ನು ಹೊರಡಿಸಿದ್ದು, ಮಹಿಳಾ ನಟಿರನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸುವಂತೆ ದೇಶದ ದೂರದರ್ಶನ ಚಾನೆಲ್ಗಳಿಗೆ ಕರೆ ನೀಡಿದೆ.
ಅಫ್ಘಾನ್ ಮಾಧ್ಯಮಕ್ಕೆ ನೀಡಿದ ಮೊದಲ ನಿರ್ದೇಶನದಲ್ಲಿ, ತಾಲಿಬಾನ್ ಮಹಿಳಾ ದೂರದರ್ಶನ ಪತ್ರಕರ್ತರು ತಮ್ಮ ವರದಿಗಳನ್ನು ಪ್ರಸ್ತುತಪಡಿಸುವಾಗ ಇಸ್ಲಾಮಿಕ್ ಹಿಜಾಬ್ಗಳನ್ನು ಧರಿಸುವಂತೆ ಕರೆ ನೀಡಿದ್ದು, ಪ್ರವಾದಿ ಮೊಹಮ್ಮದ್ ಅಥವಾ ಇತರ ಗಣ್ಯ ವ್ಯಕ್ತಿಗಳನ್ನು ತೋರಿಸುವ ಸಿನಿಮಾಗಳನ್ನು ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಹೇಳಿದೆ.
ಇಸ್ಲಾಮಿಕ್ ಮತ್ತು ಅಫ್ಘಾನ್ ಮೌಲ್ಯಗಳಿಗೆ ವಿರುದ್ಧವಾದ ಚಲನಚಿತ್ರಗಳು ಅಥವಾ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಕರೆ ನೀಡಲಾಗಿದೆ ಎಂದು ಸಚಿವಾಲಯದ ಧಾರ್ಮಿಕ ಮಾರ್ಗದರ್ಶಿ, ವಕ್ತಾರ ಹಕೀಫ್ ಮೊಹಾಜಿರ್ ತಿಳಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ, ಅಫ್ಘಾನಿಸ್ತಾನದ ಟೆಲಿವಿಷನ್ ಚಾನೆಲ್ಗಳು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದು,ಅಮೆರಿಕನ್ ಐಡಲ್ ಶೈಲಿಯ ಗಾಯನ ಸ್ಪರ್ಧೆಯಿಂದ ಸಂಗೀತ ವೀಡಿಯೊಗಳವರೆಗೆ, ಹಲವಾರು ಟರ್ಕಿಶ್ ಮತ್ತು ಭಾರತೀಯ ಕೆಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದರು.
ಇಸ್ಲಾಮಿಸ್ಟ್ಗಳು 1996 ರಿಂದ 2001 ರವರೆಗೆ ಆಳ್ವಿಕೆ ನಡೆಸಿದಾಗ ಮಾತನಾಡಲು ಯಾವುದೇ ಅಫಘಾನ್ ಮಾಧ್ಯಮ ಇರಲಿಲ್ಲ ಅವರು ದೂರದರ್ಶನ, ಚಲನಚಿತ್ರಗಳು ಮತ್ತು ಇತರ ರೀತಿಯ ಮನರಂಜನೆಯನ್ನು ನಿಷೇಧಿಸಿದ್ದರು.
ಇನ್ನು ಹೊಸ ನಿರ್ದೇಶನವನ್ನು ಭಾನುವಾರ ಪ್ರಸಾರ ಮಾಡಲಾಗಿದ್ದು, ತಾಲಿಬಾನ್ ಈಗಾಗಲೇ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರು ಧರಿಸಬಹುದಾದ ನಿಯಮಗಳನ್ನು ಪರಿಚಯಿಸಿದ್ದಾರೆ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಭರವಸೆಯ ಹೊರತಾಗಿಯೂ ಹಲವಾರು ಆಫ್ಘನ್ ಪತ್ರಕರ್ತರನ್ನು ಹೊಡೆದು ಕಿರುಕುಳ ನೀಡಿದ್ದಾರೆ.