ಅಮೇರಿಕಾ, ನ.22 (DaijiworldNews/PY): ಕ್ರಿಸ್ಮಸ್ ಪರೇಡ್ನಲ್ಲಿ ಭಾಗವಹಿಸಿದ್ದ ಜನರ ಮೇಲೆ ಎಸ್ಯುವಿ ಹಾರಿದ ಪರಿಣಾಮ 5 ಮಂದಿ ಸಾವನ್ನಪ್ಪಿ, 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ವಿಸ್ಕಾನ್ಸಿನ್ನ ವುಕೆಸಾದಲ್ಲಿ ನಡೆದಿದೆ.
ಎಸ್ಯುವಿ ಚಾಲಕನನ್ನು ಬಂಧಿಸಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಡ್ಯಾನ್ ಥಾಮ್ಸ್ ಮಾಹಿತಿ ನೀಡಿದ್ದಾರೆ.
ಎಸ್ಯುವಿ ವಾಹನವು ಬ್ಯಾರಿಕೇಡ್ಗಳನ್ನು ಗುದ್ದಿಕೊಂಡು ಜನರ ಮೇಲೆ ಹರಿದಿದೆ. ಕೆಲವು ಮಂದಿ ಮೃತಪಟ್ಟಿದ್ದು, ಮಕ್ಕಳು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ಧಾರೆ. ಮೃತಪಟ್ಟವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. 30ಕ್ಕೂ ಅಧಿಕ ಮಂದಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ವಾನವು ಬ್ಯಾರಿಕೇಡ್ ಅನ್ನು ಮುರಿದು ಬರುತ್ತಿದ್ದಂತೆ ಪೊಲೀಸ್ ಅಧಿಕಾರಿಯೋರ್ವರು ವಾಹನದತ್ತ ಗುಂಡು ಹಾರಿಸಿದ್ದಾರೆ. ಒಂದು ವಿಡಿಯೋದಲ್ಲಿ ಎಸ್ಯುವಿ ಬ್ಯಾರಿಕೇಡ್ ದಾಟಿ ಬರುತ್ತಿರುವ ದೃಶ್ಯವಿದ್ದರೆ, ಮತ್ತೊಂದು ವಿಡಿಯೋದಲ್ಲಿ ರಸ್ತೆಯಲ್ಲಿ ಹೆಣ್ಣು ಮಗು ನೃತ್ಯ ಮಾಡುತ್ತಿರುವಾಗ ಆಕೆಯ ಪಕ್ಕದಿಂದ ವಾಹನ ಹಾಯ್ದು ಜನರ ಮೇಲೆ ಹರಿದ ದೃಶ್ಯವಿದೆ.