ಪಾಕಿಸ್ತಾನ, ನ.23 (DaijiworldNews/HR): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 8 ವರ್ಷದ ಹಿಂದು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿರುವ ದುರ್ಘಟನೆ ಸಂಭವಿಸಿದೆ.
-
ಬಾಲಕನ ಶವದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತುಗಳು ಕುತ್ತಿಗೆ, ಬೆನ್ನು, ಸೊಂಟದಲ್ಲಿ ಪರಚಿರುವ ಗುರುತುಗಳು ಪತ್ತೆಯಾಗಿದೆ. ಬಾಲಕ ಐದನೇ ತರಗತಿ ಓದುತ್ತಿದ್ದಾನೆ ಎಂದು ಮಕ್ಕಳ ರಕ್ಷಣಾ ಪ್ರಾಧಿಕಾರ ಜುಬೇರ್ ಮಹೇರ್ ಹೇಳಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ತಕ್ಷಣ ಬಾಬರ್ಲೋಯ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಲರ್ಟ್ ಆಗಿದ್ದರು. ಆ ಬಾಲಕನನ್ನು ಕೊಂದು, ಅತ್ಯಾಚಾರವೆಸಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಇನ್ನು ಆರೋಪಿಗಳು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಇಬ್ಬರು ಕಾಮುಕರಲ್ಲಿ ಈ ಪೈಕಿ ಒಬ್ಬ ತಪ್ಪೊಪ್ಪಿಕೊಂಡಿದ್ದಾನೆ.