ಲಂಡನ್, ನ.24 (DaijiworldNews/PY): 20 ವರ್ಷಗಳ ಹಿಂದೆ 86 ವರ್ಷದ ವೃದ್ಧೆಯ ಸಾವಿಗೆ ಕಾರಣವಾಗಿದ್ದ ಅಪರಾಧಿಯೋರ್ವ ಸಿಕ್ಕಿಬಿದ್ದಿದ್ದಾನೆ.
2001 ರಂದು ದಕ್ಷಿಣ ಲಂಡನ್ನ ಬ್ರಿಕ್ಸ್ಟನ್ನಲ್ಲಿ ವಾಸವಿದ್ದ ವೃದ್ಧೆ ಹಿಲ್ದಾ ಲಾಕರ್ಟ್ ಅವರನ್ನು ಜೂನಿಯರ್ ಯಂಗ್ (39) ಎಂಬಾತ ಅವರ ಮನೆಯ ಎದುರೇ ದರೋಡೆ ಮಾಡಿದ್ದ. ಈ ವೇಳೆ ಅವರನ್ನು ತಳ್ಳಿ ಕೆಳಗೆ ಬೀಳಿಸಿದ್ದ ಕಾರಣ ಅವರು ಮೃತಪಟ್ಟಿದ್ದರು.
ಜೂನಿಯರ್ ಯಂಗ್ ಅನ್ನು ಡಿಎನ್ಎ ಅಂಶಗಳನ್ನು ಪರಿಶೀಲಿಸಿ ಬಂಧಿಸಲಾಗಿತ್ತು. ಆದರೆ, ಡಿಎನ್ಎ ಹೊಂದಾಣಿಕೆ ಸರಿಯಾಗದೇ ಇದ್ದ ಕಾರಳ ಜೂನಿಯರ್ ಯಂಗ್ ಅನ್ನು ಬಿಡುಗಡೆ ಮಾಡಲಾಗಿತ್ತು.
ಈ ಪ್ರಕರಣವನ್ನು 2015ರಲ್ಲಿ ಮತ್ತೆ ಕೈಗೆತ್ತಿಕೊಂಡಿದ್ದು, ಡಿಎನ್ಎ ಪರೀಕ್ಷೆ ಮಾಡಲಾಯಿತು. ಜೂನಿಯರ್ ಯಂಗ್ ವೃದ್ದೆಯ ಹತ್ಯೆಯ ಅಪರಾಧಿ ಎಂದು ಸಾಬೀತಾಗಿದೆ.