ಡಮಾಸ್ಕಸ್, ನ.24 (DaijiworldNews/PY): "ಇಸ್ರೇಲ್ನ ಯುದ್ಧವಿಮಾನಗಳು ದೇಶದ ಮಧ್ಯ ಭಾಗದಲ್ಲಿರುವ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪರಿಣಾಮ 2 ನಾಗರಿಕರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ" ಎಂದು ಸಿರಿಯಾ ತಿಳಿಸಿದೆ.
"ದಾಳಿಯಲ್ಲಿ ಗಾಯಗೊಂಡವರ ಪೈಕಿ 6 ಮಂದಿ ಯೋಧರಿದ್ದಾರೆ" ಎಂದು ಸೇನಾಧಿಕಾರಿಯೋರ್ವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಲೆಬನಾನ್ ವಾಯುಪ್ರದೇಶದಲ್ಲಿ ಹಾರಾಟ ನಡೆಸಿದ ಇಸ್ರೇಲ್ನ ಯುದ್ಧವಿಮಾನಗಳು, ಕ್ಷಿಪಣಿಗಳಿಂದ ದಾಳಿ ನಡೆಸಿದವು. ಇದಕ್ಕೆ ಪ್ರತಿದಾಳಿ ನಡೆಸಿದ ಸಿರಿಯಾ ರಕ್ಷಣಾ ಪಡೆಗಳು, ಕ್ಷಿಪಣಿಗಳನ್ನು ಹೊಡೆದುರುಳಿಸಿವೆ" ಎಂದು ವರದಿ ತಿಳಿಸಿದೆ.
"ಸಿರಿಯಾದಲ್ಲಿ, ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆ, ಲೆಬನಾನ್ ಮೂಲದ ಹಿಜ್ಬುಲ್ ತನ್ನ ಸದಸ್ಯರನ್ನು ನಿಯೋಜಿಸಿದೆ. ಈ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ" ಎಂದು ಇಸ್ರೇಲ್ ಹೇಳಿದೆ.