ಕೊಪನ್ ಹೆಗನ್, ನ 25 (DaijiworldNews/MS): ಐರೋಪ್ಯ ಒಕ್ಕೂಟದ ಸ್ವೀಡನ್ ಗೆ ಮೊದಲ ಮಹಿಳಾ ಪ್ರಧಾನಿಯಾಗಿ ಮಗ್ದಾಲೆನಾ ಆಂಡರ್ಸನ್ ಅವರು ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದ 54 ವರ್ಷದ ಮ್ಯಾಗ್ಡಲೀನಾ ಆಂಡರ್ಸನ್ ಅವರು ಪ್ರಧಾನಿಯಾದ 12 ಗಂಟೆಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮ್ಯಾಗ್ಡಲಿನಾ ಆಂಡರ್ಸನ್ ಅವರು ಸಂಸತ್ತಿನ ಸ್ಪೀಕರ್ಗೆ ತಾನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಒಂದೇ ಪಕ್ಷದ ಸರಕಾರದ ಮುಖ್ಯಸ್ಥೆಯಾಗಿ ನೇಮಕಗೊಳ್ಳುವ ಭರವಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಮಾಕ್ರಟಿಕ್ ಲೇಬರ್ ಪಕ್ಷದ ನಾಯಕ, ಪ್ರಧಾನಿ ಸ್ಟೀಫನ್ ಲೋಫ್ವೆನ್ ತಮ್ಮ ಸ್ಥಾನ ತ್ಯಜಿಸಿದ್ದರು. ಮ್ಯಾಗ್ಡಲೀನಾ ಅವರು ಹಣಕಾಸು ಸಚಿವೆಯಾಗಿದ್ದಾಗ ಮಂಡಿಸಿದ್ದ ಬಜೆಟ್ ಅನ್ನು ಸಂಸತ್ತು ಅಂಗೀಕರಿಸಲಿಲ್ಲ. ಇದರಿಂದ ಮೈತ್ರಿ ಕೂಟ ಸರ್ಕಾರದಿಂದ ನಿರ್ಗಮಿಸುತ್ತಿರುವುದಾಗಿ ಗ್ರೀನ್ಸ್ ಪಕ್ಷ ಘೋಷಿಸಿತು. ಇದರೊಂದಿಗೆ ಮ್ಯಾಗ್ಡಲೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ರಾಜೀನಾಮೆ ಪತ್ರವನ್ನು ಸಂಸತ್ತಿನ ಸ್ಪೀಕರ್ಗೆ ಕಳುಹಿಸಿದ್ದಾರೆ.
ಸ್ವೀಡನ್ನ ಸಂಸತ್ತು ರಿಕ್ಸ್ಡಾಗ್ 349 ಸದಸ್ಯ ಬಲ ಹೊಂದಿದ್ದು, ಆಂಡರ್ಸನ್ ಅವರ ಪರವಾಗಿ 117 ಮತ ಚಲಾವಣೆಯಾದರೆ, 174 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದರು ಮತ್ತು 57 ಸದಸ್ಯರು ಗೈರುಹಾಜರಾಗಿದ್ದರು.