ಪಾಕಿಸ್ತಾನ, ನ.25 (DaijiworldNews/PY): ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಅವರು ಇಂಗ್ಲೀಷ್ನಲ್ಲಿ ಗಾರ್ಲಿಕ್ ಎಂದರೆ ಶುಂಠಿ ಎಂದು ಹೇಳಿರಿವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲೆದಿನಗಳ ಹಿಂದೆ ಬೆಳ್ಳುಳ್ಳಿ ಹಾಗೂ ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಪಾಕ್ ಮಾಹಿತಿ ಹಾಗೂ ಪ್ರಸಾರ ಸಚಿವ ಫವಾದ್ ಚೌಧರಿ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ಸಂದರ್ಭ ಅವರು ಗಾರ್ಲಿಕ್ ಎಂದರೆ ಅದ್ರಕ್ (ಶುಂಠಿ) ಎಂದಿದ್ದಾರೆ.
ಸಚಿವರು ಹಿಂದಿಯಲ್ಲಿ ಮಾತನಾಡುತ್ತಾ, ಬೆಳ್ಳುಳ್ಳಿ ಹಾಗೂ ಶುಂಠಿಗೆ ಇಂಗ್ಲೀಷ್ನಲ್ಲಿ ಏನು ಹೇಳುತ್ತಾರೆ ಎನ್ನುವ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ಗಾರ್ಲಿಕ್ ಅಂದ್ರೆ ಶುಂಠಿ, ಅಲ್ಲಲ್ಲಾ ಬೆಳ್ಳುಳ್ಳಿ.. ಇಲ್ಲ ಶುಂಠಿಯೇ ಇರಬಹುದು ಎಂದು ಸಚಿವರು ಗೊಂದಲಕ್ಕೊಳಗಾಗಿದ್ದಾರೆ.
ಸಚಿವರ ವಿಡಿಯೋವನ್ನು ಪಾಕಿಸ್ತಾನಿ ಪರ್ತಕರ್ತೆ ನೈಲಾ ಇನಾತ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ.
ಇಂಗ್ಲೀಷ್ನಲ್ಲಿ ಗಾರ್ಲಿಕ್ ಎಂದರೆ ಶುಂಠಿ ಎಂದ ಮಾಹಿತಿ ಸಚಿವ ಫವಾದ್ ಚೌಧರಿ. ಓರ್ವ ವ್ಯಕ್ತಿ ಪ್ರತಿದಿನ ಹೊಸತನ್ನು ಕಲಿಯುತ್ತಾನೆ ಎಂದು ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಶುಂಠಿ ಮತ್ತು ಬೆಳ್ಳುಳ್ಳಿಯ ನಡುವೆ ಗೊಂದಲಕ್ಕೀಡಾಗುವುದು ಅಸಾಮಾನ್ಯವೇನಲ್ಲ ಎಂದು ಹಲವು ಬಳಕೆದಾರರು ಸಚಿವರನ್ನು ಬೆಂಬಲಿಸಿದ್ದಾರೆ. ಇನ್ನು ಅನೇಕರು ಸಚಿವರು ಬಾಲ್ಯದಲ್ಲಿ ಯಾವ ಶಾಲೆಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.