ಮಾಸ್ಕೊ, ನ.26 (DaijiworldNews/PY): ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ ದುರಂತ ಇದಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಲಿಸ್ಟ್ವ್ಯಾಜ್ನ್ಯಾಯ ಗಣಿ ದುರಂತದಲ್ಲಿ ಯಾರೊಬ್ಬರು ಸಹ ಬದುಕುಳಿದಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಮೃತದೇಹಗಳು ಗಣಿಯ ಆಳದಲ್ಲಿದ್ದು, ತಾಪಮಾನ ಹಾಗೂ ಮೀಥೇನ್ ಸಾಂದ್ರತೆ ಕಡಿಮೆಯಾದ ಬಳಿಕ ಮೃತದೇಹಗಳನ್ನು ಮೇಲಕ್ಕೆ ತರಲಾಗುವುದು ಎಂದು ಹೇಳಲಾಗಿದೆ.
ಘಟನೆ ಸಂಭವಿಸಿದ ಕೆಮೆರೊವೊ ಪ್ರದೇಶದಲ್ಲಿ ಶುಕ್ರವಾರದುಂದ ಭಾನುವಾರದವರೆಗೆ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬೇಸರ ವ್ಯಕ್ತಡಿಸಿದ್ಧಾರೆ. ಇನ್ನು ಸುರಕ್ಷತಾ ಕ್ರಮಗಳ ಉಲ್ಲಂಘನೆಯ ಆರೋಪದಲ್ಲಿ ಗಣಿಯ ಹಿರಿಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.