ಹೈದರಾಬಾದ್, ನ. 30 (DaijiworldNews/HR): ಅಮೇರಿಕಾದ ಸಾಯಿ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದ ತೆಲಂಗಾಣ ಮೂಲದ ಯುವಕನೊಬ್ಬ ತಾಯ್ನಾಡಿಗೆ ಹಿಂದಿರುಗುವ ಸಂತೋಷದಿಂದ ಮನೆಯವರಿಗೆ ಉಡುಗೊರೆ ತರಲು ಶಾಪಿಂಗ್ಗೆ ಹೋಗಿದ್ದಾಗ ಸಾವಿಗೀಡಾಗಿರುವ ಘಟನೆ ಅಮೇರಿಕಾದ ಬಕಿ ರಾಜ್ಯದ ಓಹಿಯೋದಲ್ಲಿ ನಡೆದಿದೆ.
ಮೃತ ಯುವಕನನ್ನು ತೆಲಂಗಾಣದ ಸೂರ್ಯಪೇಟೆಯ ನಿವಾಸಿ ಚಿರು (22) ಎಂದು ಗುರುತಿಸಲಾಗಿದೆ.
ಯುವಕನು ಓಹಿಯೋ ನಗರದಲ್ಲಿ ವಾಸವಿದ್ದು, ಡಿಸೆಂಬರ್ 15ರಂದು ತಾಯ್ನಾಡಿಗೆ ಮರಳಲು ಸಿದ್ಧವಾಗಿದ್ದ. ಈ ಹಿನ್ನೆಲೆಯಲ್ಲಿ ಮನೆಯವರಿಗೆ ಉಡುಗೊರೆ ತರಲೆಂದು ಯುವತಿಯೊಬ್ಬಳ ಜತೆ ಶಾಪಿಂಗ್ಗೆ ಹೋಗಿದ್ದ ಎಂದು ವರದಿಯಾಗಿದೆ.
ಇನ್ನು ಶಾಪಿಂಗ್ಗೆ ಹೋಗುತ್ತಿದ್ದಾಗ ಚಿರುವಿನ ಕಾರು ಸ್ಕಿಡ್ ಆಗಿ ಎದುರಿಗೆ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.