ಅಲಬಾಮಾ, ನ 30 (DaijiworldNews/MS): ಅಮೇರಿಕದ ಅಲಬಾಮಾದಲ್ಲಿ ಗುಂಡಿನ ದಾಳಿಗೆ 19 ವರ್ಷದ ಕೇರಳದ ಯುವತಿಯೊಬ್ಬರು ಬಲಿಯಾಗಿದ್ದಾರೆ.
ಮೃತರನ್ನು ಕೇರಳದ ತಿರುವಲ್ಲಾ ಮೂಲದವರಾದ ಮರಿಯಮ್ ಸುಸಾನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಮರಿಯಮ್ ನಾಲ್ಕು ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಕೊಲೆಗಾರ ಆಕೆಯ ನೆರೆಹೊರೆಯವರೆಂದು ವರದಿಯಾಗಿದೆ.
ಸುಸಾನ್ ಮ್ಯಾಥ್ಯೂ ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲಿನ ಮಹಡಿಯಿಂದ ಮೇಲ್ಛಾವಣಿ ಸೀಳಿಕೊಂಡು ಬಂದ ಗುಂಡು ಆಕೆಗೆ ತಗುಲಿದೆ. ಮಾಂಟ್ಗೊಮೆರಿ ಪೊಲೀಸ್ ಇಲಾಖೆ ತನಿಖೆಯನ್ನು ಪ್ರಾರಂಭಿಸಿದೆ.
ಮರಿಯಮ್ ಸುಸಾನ್ ಮ್ಯಾಥ್ಯೂ ಕೇರಳದ ಎಡಪಲ್ಲಿ ಪರಂಬಿಲ್ ವೀಟಿಲ್ನ ಬೋಬನ್ ಮ್ಯಾಥ್ಯೂ ಮತ್ತು ಬಿನ್ಸಿ ದಂಪತಿಗಳ ಪುತ್ರಿಯಾಗಿದ್ದಾರೆ.ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಪಾರ್ಥಿವ ಶರೀರವನ್ನು ಕೇರಳಕ್ಕೆ ತರಲಾಗುವುದು.
ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಅಮೆರಿಕದಲ್ಲಿ ಮೂರು ಮಹಿಳೆಯರನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ.