ವಾಷಿಂಗ್ಟನ್, ಡಿ.03 (DaijiworldNews/PY): ಅಂತರಾಷ್ಟ್ರೀಯ ಹಣಕಾಸು ನಿಧಿಯ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥನ್ ಅವರು ಬಡ್ತಿ ಪಡೆದಿದ್ದಾರೆ.
"ಮುಂದಿನ ವರ್ಷದ ಮೊದಲ ತಿಂಗಳಿನಲ್ಲಿ ಐಎಂಎಫ್ನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜೆಫ್ರಿ ಒಕಾಮೊಟೊ ಅವರು ನಿವೃತ್ತರಾಗಲಿದ್ದು, ಈ ಹಿನ್ನೆಲೆ ಗೀತಾ ಗೋಪಿನಾಥನ್ ಅವರಿಗೆ ಉನ್ನತ ಹುದ್ದೆ ನೀಡಲಾಗಿದೆ" ಎಂದು ಐಎಂಎಫ್ ಹೇಳಿದೆ.
"ಗೀತಾ ಹಾಗೂ ಜೆಫ್ರಿ ಅವರು ಉತ್ತಮ ಸಹೋದ್ಯೋಗಿಗಳು. ನನಗೆ ಜೆಫ್ರಿ ಅವರು ತೊರೆಯುತ್ತಿರುವ ವಿಚಾರ ಬೇಸರ ತಂದಿದೆ. ಆದರೆ, ಗೀತಾ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಸಂತಸದ ವಿಚಾರ" ಎಂದು ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದು, ಐಎಂಎಫ್ನಲ್ಲಿ 2019ರ ಜನವರಿಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕೆಲಸ ಪ್ರಾರಂಭಿಸಿದ್ದರು. ಇದಕ್ಕೂ ಮುನ್ನ ಗೀತಾ ಅವರು ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.