ವಾಷಿಂಗ್ಟನ್, ಡಿ.04 (DaijiworldNews/PY): "ಈ ಹಿಂದೆ ಭಾರತಕ್ಕೆ ಗಡಿಪಾರು ಮಾಡಲಾಗಿದ್ದ ಮೂವರು ಭಾರತೀಯ ಪ್ರಜೆಗಳು ಮತ್ತೆ ಅಮೇರಿಕಾಕ್ಕೆ ಪ್ರವೇಶಿಸಿದ ಕಾರಣ ಅವರನ್ನು ವರ್ಜಿನ್ ಐಲ್ಯಾಂಡ್ ಬಳಿ ಬಂಧಿಸಲಾಗಿದೆ" ಎಂದು ಅಮೇರಿಕಾದ ವಕೀಲರು ಹೇಳಿದ್ಧಾರೆ.
ಫ್ಲಾರಿಡಾದ ಲಾಡರ್ಗೆ ತೆರಳುವ ನಿಟ್ಟಿನಲ್ಲಿ ವಿಮಾನವೇರಲು ಹೊರಟ್ಟಿದ್ದ ಕೃಷ್ಣಾಬೆನ್ ಪಟೇಲ್ (25), ಅಶೋಕ್ಕುಮಾರ್ ಪಟೇಲ್ (39) ಹಾಗೂ ನಿಕುಂಜ್ಕುಮಾರ್ ಪಟೇಲ್ (27) ಅವರನ್ನು ಬಂಧಿಸಲಾಗಿದೆ.
ಈ ಮೂವರು ಭಾರತೀಯ ಪ್ರಜೆಗಳನ್ನು ನವೆಂಬರ್ 24ರಂದು ಸೇಂಟ್ ಕ್ರೋಕ್ಸ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
"ತಪ್ಪಿತಸ್ಥರು ಎನ್ನುವ ತೀರ್ಪು ಬಂದರೆ 10ವರ್ಷಗಳ ಜೈಲುಶಿಕ್ಷೆ ಹಾಗೂ ನಂತರದ ಗಡಿಪಾರು ಶಿಕ್ಷೆಯನ್ನ ಎದುರಿಸಬೇಕಾಗುತ್ತದೆ" ಎಂದು ನ್ಯಾಯಾಂಗ ಇಲಾಖೆ ಹೇಳಿದೆ.