ಬ್ಯಾಂಕಾಕ್, ಡಿ.06 (DaijiworldNews/PY): ನಾಗರಿಕ ಹೋರಾಟಗಳ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮ್ಯಾನ್ಮಾರ್ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೊರೊನಾ ನಿಯಮ ಉಲ್ಲಂಘನೆ ಹಾಗೂ ಶಾಂತಿಗೆ ಭಂಗ ಉಂಟುಮಾಡಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮ್ಯಾನ್ಮಾರ್ ನ್ಯಾಯಾಲಯ ಈ ತೀರ್ಪು ನೀಡಿದೆ.
76 ವರ್ಷದ ಸೂಕಿ ಅವರನ್ನು ಫೆಬ್ರವರಿ ತಿಂಗಳಿನಲ್ಲಿ ಮ್ಯಾನ್ಮಾರ್ನಲ್ಲಾದ ಸೇನಾ ದಂಗೆಯ ಬಳಿಕ ಗೃಹಬಂಧನದಲ್ಲಿ ಇರಿಸಲಾಗಿತ್ತು.
ಕೊರೊನಾ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಆರೋಪಗಳು ಸೇರಿದಂತೆ ಒಟ್ಟು 10 ಆರೋಪಗಳು ಸೂಕಿಯ ಅವರ ಮೇಲಿವೆ.