ಲಂಡನ್ , ಡಿ 11 (DaijiworldNews/MS): 22 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ, ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿದ ಕಾರಣಕ್ಕಾಗಿ ಯುಕೆಯ ಆಕ್ಸ್ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟಿದ್ದಾನೆ.
ಮಾತ್ರವಲ್ಲದೆ ಯುಕೆ ನ್ಯಾಯಾಲಯವು ವಿದ್ಯಾರ್ಥಿಗೆ ಹಿಂಬಾಲಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ ಹಿನ್ನಲೆಯಲ್ಲಿ ಗುರುವಾರ ನಾಲ್ಕು ತಿಂಗಳ ಜೈಲು ಶಿಕ್ಷೆ, ಎರಡು ವರ್ಷಗಳ ಕಾಲ ಅಮಾನತು ಮತ್ತು ಐದು ವರ್ಷಗಳ ತಡೆಯಾಜ್ಞೆ ವಿಧಿಸಿದೆ. ಇನ್ನು ವಿಶ್ವವಿದ್ಯಾಲಯವೂ ಅವನಿಗೆ ನಾಲ್ಕು ತಿಂಗಳ ಅಮಾನತು ಶಿಕ್ಷೆಯನ್ನು ವಿಧಿಸಿದೆ.
ಕಳೆದ ತಿಂಗಳು, ಮಹಿಳಾ ನರ್ಸಿಂಗ್ ವಿದ್ಯಾರ್ಥಿಯನ್ನು ಹಿಂಬಾಲಿಸಿದ್ದಲ್ಲದೇ, ಆಕೆಗೆ 100 ಪುಟಗಳ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಭಾವನಾನಿ ಮೇಲಿತ್ತು.
ಆಕ್ಸ್ಫರ್ಡ್ ಮೇಲ್ ಪ್ರಕಾರ, ಕಳೆದ ತಿಂಗಳು ಭವ್ನಾನಿ ಶಿಕ್ಷೆಗೆ ಗುರಿಯಾಗಬೇಕಿತ್ತು, ಆದರೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ತನ್ನ ಕೋರ್ಸ್ನಿಂದ ಹೊರಹಾಕಬೇಕೆ ಎಂದು ವಿಶ್ವವಿದ್ಯಾಲಯವು ನಿರ್ಧರಿಸುವ ಆರು ವಾರಗಳ ಮೊದಲು ನ್ಯಾಯಾಲಯವು ಕೇಳಿದಾಗ, ಪ್ರಕರಣವನ್ನು ಜನವರಿ 2022 ಕ್ಕೆ ಮುಂದೂಡಲಾಗಿತ್ತು. ವಿಶ್ವವಿದ್ಯಾಲಯದಿಂದ ಮತ್ತು ಅವರು ಓದುತ್ತಿದ್ದ ಪದವಿಯಿಂದ ಹೊರಹಾಕಿದ್ದಾರೆ ಎಂದು ಡಿಫೆನ್ಸ್ ವಕೀಲ ರಿಚರ್ಡ್ ಡೇವಿಸ್ ನ್ಯಾಯಾಲಯಕ್ಕೆ ತಿಳಿಸಿದಾಗ
ಆಕ್ಸ್ಫರ್ಡ್ ಕ್ರೌನ್ ಕೋರ್ಟ್ನಲ್ಲಿ ನ್ಯಾಯಾಧೀಶ ನಿಗೆಲ್ ಡಾಲಿ ಅವರು ತೀರ್ಪು ಪ್ರಕಟಿಸಿದ್ದಾರೆ.