ಜೋಹಾನ್ಸ್ಬರ್ಗ್, ಡಿ.13 (DaijiworldNews/PY): "ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ (69) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ.
ಅಧ್ಯಕ್ಷ ರಾಮಫೋಸಾ ಅವರು ಪೂರ್ಣವಾಗಿ ಲಸಿಕೆ ಪಡೆದಿದ್ದು, ದೇಶದಲ್ಲಿ ದಾಖಲೆ ಮ್ರಮಾಣದಲ್ಲಿ ದೈನಂದಿನ ಪ್ರಕರಣಗಳು 37,875ಕ್ಕೆ ಏರಿಕೆಯಾದ ದಿನವೇ ಕೊರೊನಾ ಸೋಂಕು ತಗುಲಿದೆ.
ರಾಮಫೋಸಾ ಅವರು ಇಂದು ಬೆಳಗ್ಗೆ ಕೇಪ್ಟೌನ್ನಲ್ಲಿ ಮಾಜಿ ಉಪಾಧ್ಯಕ್ಷ ಎಫ್ಡಬ್ಲ್ಯೂ ಡಿ ಕ್ಲರ್ಕ್ ಅವರ ಸ್ಮರಣಾರ್ಥ ಸ್ಟೇಟ್ ಮೆಮೋರಿಯಲ್ ಸರ್ವೀಸ್ಗೆ ಹಾಜರಾಗಿದ್ದರು.
ಈ ಬಗ್ಗೆ ಹೇಳಿಕೆಯಲ್ಲಿ ತಿಳಿಸಿರುವ ಸಚಿವ ಮೊಂಡಿ ಗುಂಗುಬೆಲೆ ಅವರು, "ಅಧ್ಯಕ್ಷರು ಚಟುವಟಿಕೆಯಿಂದ ಉತ್ತಮ ಮನಸ್ಥಿತಿಯಲ್ಲಿದ್ದು, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ರಕ್ಷಣಾ ಪಡೆಯ ದಕ್ಷಿಣ ಆಫ್ರಿಕಾ ಮಿಲಿಟರಿ ಆರೋಗ್ಯ ಸೇವೆಗಳ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದಿದ್ದಾರೆ.
"ಕೇಪ್ಟೌನ್ನಲ್ಲಿ ಅಧ್ಯಕ್ಷರು ಸ್ವಯಂ ಪ್ರತ್ಯೇಕ ವಾಸವಾಗಿದ್ದಾರೆ. ಮುಂದಿನ ವಾರದವರೆಗೆ ಎಲ್ಲಾ ಹೊಣೆಗಾರಿಕೆಗಳನ್ನು ಉಪಾಧ್ಯಕ್ಷ ಡೇವಿಡ್ ಮಬುಜಾ ಅವರಿಗೆ ವಹಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ರಾಮಫೋಸಾ ಅವರಿ ಶೀಘ್ರವೇ ಗುಣಮುಖರಾಗಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಹಾರೈಸಿದ್ದಾರೆ.